ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Rain | ಕೈಕೊಟ್ಟ ಮಳೆರಾಯ; ಅತೀ ಕಡಿಮೆ ಬಿತ್ತನೆ

ಮಾರಾಟವಾಗದ ಬಿತ್ತನೆ ಬೀಜ; ಜುಲೈ, ಆಗಸ್ಟ್‌ ತಿಂಗಳಲ್ಲಿ ಕೃಪೆ ತೋರದ ವರುಣ
Published 6 ಸೆಪ್ಟೆಂಬರ್ 2023, 7:00 IST
Last Updated 6 ಸೆಪ್ಟೆಂಬರ್ 2023, 7:00 IST
ಅಕ್ಷರ ಗಾತ್ರ

ಮಳವಳ್ಳಿ: ತಾಲ್ಲೂಕಿನಾದ್ಯಂತ ಮಳೆ ಕೊರತೆ ಕಾಡುತ್ತಿದ್ದು ಮುಂಗಾರು ಹಂಗಾಮಿನ ಬಿತ್ತೆನ ಕಾರ್ಯ ಹಿಂದುಳಿದಿದೆ. ಅತ್ಯಂಕ ಕಡಿಮೆ ಬಿತ್ತನೆಯಾಗಿದ್ದು ಬರಪರಿಸ್ಥಿತಿ ಎದುರಾಗಿದೆ.

2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 28,411 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆ ಗುರಿ ಹೊಂದಲಾಗಿತ್ತು. ಕಳೆದ ಎರಡು ತಿಂಗಳಿಂದ ಸೆ.2ರವರೆಗೆ ಕೇವಲ 3,755 (ಶೇ.13) ಹೆಕ್ಟೇರ್ ಭೂಮಿಯಲ್ಲಿ ಮಾತ್ರ ಬಿತ್ತನೆ ಕಾರ್ಯ ನಡೆದಿದೆ.  ಮತ್ತೊಂದೆಡೆ ಬಿತ್ತನೆ ಕಾರ್ಯ ತಡವಾದರೆ ಕಡಿಮೆ ಇಳುವರಿ ಪಡೆಯುವ ಆತಂಕ ಅನ್ನದಾತರನ್ನು ಕಾಡುತ್ತಿದೆ.

ವಾರ್ಷಿಕ 702 ಮಿ.ಮೀ ವಾಡಿಕೆ ಮಳೆಯಾಗಬೇಕು. ಆದರೆ ಪ್ರಸ್ತುತ 351 ಮಿ.ಮೀ ಮಾತ್ರ ಮಳೆಯಾಗಿದೆ. ಜನವರಿಯಿಂದ ಏಪ್ರಿಲ್‌ವರೆಗೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೇ ಕೇವಲ 14 ಮಿ.ಮೀ.ಮಳೆಯಾಗಿದೆ. ಮೇ ಮತ್ತು ಜೂನ್ ತಿಂಗಳಲ್ಲಿ ಉತ್ತಮವಾಗಿದ್ದ ಮಳೆ ಜುಲೈ ಮತ್ತು ಆಗಸ್ಟ್‌ನಲ್ಲಿ ಕೈಕೊಟ್ಟಿದೆ. ಸೆ.1 ಮತ್ತು 3ರಂದು 182 ಮಿ.ಮೀ ಮಳೆಯಾಗಿದ್ದು, ಶೇ 50ರಷ್ಟು ಮಳೆ ಕೊರತೆಯಾಗಿದೆ.

ಕೆಆರ್‌ಎಸ್‌ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದರಿಂದ ಜಲಾಶಯದ ನೀರಿನ ಮಟ್ಟ ಕಡಿಮೆಯಾಗುತ್ತಿದ್ದು, ನಾಲಾ ಭಾಗದ ರೈತರಲ್ಲಿ ಆತಂಕ ಮೂಡಿದೆ. 15 ದಿನಗಳೊಮ್ಮೆ ಕಟ್ಟು ಪದ್ಧತಿಯನ್ನು ನೀರು ಕೊಟ್ಟರೂ ಜಲಾಶಯದ ಕೊನೆಯ ಭಾಗವಾಗಿರುವ ತಾಲ್ಲೂಕಿನ ನಾಲೆಗಳಿಗೆ ಸಮರ್ಪಕವಾಗಿ ನೀರು ಬರುವುದಿಲ್ಲ, ಇದ್ದರಿಂದಾಗಿ ರೈತರು ಕೊಳವೆ ಬಾವಿ ಹಾಗೂ ಮಳೆಯನ್ನೇ ಅವಲಂಬಿಸುವಂತಾಗಿದೆ.

‘ಮಳೆಬಾರದ ಹಾಗೂ ನಾಲೆಯಲ್ಲಿ ನೀರಿಲ್ಲದ ಕಾರಣ ಬಿತ್ತನೆಗಾಗಿ ಸಂಗ್ರಹಿಸಿದ್ದ 1550 ಕ್ವಿಂಟಲ್ ಭತ್ತದ ಬಿತ್ತನೆ ಬೀಜದಲ್ಲಿ ಕೇವಲ 320 ಕ್ವಿಂಟಲ್ ಮಾತ್ರ ಮಾರಾಟವಾಗಿದೆ. ಅಲ್ಲದೇ 45 ಕ್ವಿಂಟಲ್ ರಾಗಿಯಲ್ಲಿ 30 ಕ್ವಿಂಟಲ್ ಹಾಗೂ 5 ಕ್ವಿಂಟಲ್ ಜೋಳದಲ್ಲಿ 1 ಕ್ವಿಂಟಲ್ ಬಿತ್ತನೆ ಬೀಜಗಳನ್ನು ರೈತರು ಖರೀದಿಸಿದ್ದಾರೆ. ತಾಲ್ಲೂಕಿನಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ದಾಸ್ತಾನು ಬಹಳಷ್ಟಿದ್ದು, ಯಾವುದೇ ಕೊರತೆ ಇಲ್ಲ’ ಎಂದು ಕೃಷಿ ಇಲಾಖೆಗಳು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಳೆ ನಿರೀಕ್ಷೆಯಲ್ಲಿ ರೈತ ಕಳೆದ ಎರಡು ದಿನಗಳಲ್ಲಿ ಹಿಂದೆ ಪಟ್ಟಣ ಸೇರಿದಂತೆ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಸುರಿದ ಮಳೆಯಿಂದ ಕೆಲ ಕೃಷಿಕರಲ್ಲಿ ಸಂತಸ ಮೂಡಿದೆ. ಕಿರುಗಾವಲು ಮತ್ತು ಕಸಬಾ ಹೋಬಳಿಗಳಲ್ಲಿ ರೈತರು ಭತ್ತದ ನಾಟಿ ಕಾರ್ಯಕ್ಕೆ ಚುರುಕು ನೀಡಿದ್ದು ಈಗಾಗಲೇ ಭೂಮಿ ಹದಗೊಳಿಸುವಲ್ಲಿ ತಲ್ಲೀನರಾಗಿದ್ದಾರೆ. ಮತ್ತೊಂದೆಡೆ ಹಲಗೂರು ಮತ್ತು ಬೊಪ್ಪೇಗೌಡನಪುರ(ಬಿಜಿಪುರ) ಹೋಬಳಿಗಳಲ್ಲಿ ರಾಗಿ ಬಿತ್ತನೆಗೆ ಮುಂದಾಗುತ್ತಿದ್ದಾರೆ. ಮಳೆ ನಿರೀಕ್ಷೆಯಲ್ಲಿರುವ ರೈತರು ನಿತ್ಯ ಮೋಡದತ್ತ ದೃಷ್ಟಿ ನೆಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT