ಬುಧವಾರ, ಜುಲೈ 28, 2021
24 °C

ಪರಿಸರ ಪಾಠ ಮಾಡಿದ ಸಚಿವ ಸುರೇಶ್‌ಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಳವಳ್ಳಿ: ಪ್ರಾಥಮಿಕ ಹಾಗೂ ಪ್ರಾಢ ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ಶುಕ್ರವಾರ ಚಾಮರಾಜನರಕ್ಕೆ ಭೇಟಿ ನೀಡಿ ಪಾಪಸ್‌ ಬರುವ ಮಾರ್ಗಮಧ್ಯೆ ತಾಲ್ಲೂಕಿನ ಕಂಚುಗಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದರು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಟ್ಟು ಮಕ್ಕಳಿಗೆ ಪರಿಸರ ಸಂರಕ್ಷಣೆ ಕುರಿತ ಪಾಠ ಬೋಧನೆ ಮಾಡಿದರು.

ಕಂಚುಗಹಳ್ಳಿ ಗ್ರಾಮದ ಮಹದೇಶ್ವರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು. ನಂತರ ದೇವಸ್ಥಾನ ಆವರಣದಲ್ಲಿ ಗಿಡ ನೆಟ್ಟು ನೀರೆರೆದರು. ಶಾಲಾ ಮಕ್ಕಳನ್ನು ಕರೆದು ‘ನಿಮ್ಮ ಊರು ನೋಡಲು ಬಹಳ ಸುಂದರವಾಗಿದೆ. ಗಿಡಗಳಿಗೆ ನೀರು ಹಾಕಿ ಪೋಷಣೆ ಮಾಡಬೇಕು. ಅವುಗಳನ್ನು ಪೋಷಣೆ ಮಾಡಿದಾಗ ಮುಂದಿನ ದಿನಗಳಲ್ಲಿ ಸಾಕಷ್ಟು ಮಳೆ ಬಂದು ವ್ಯವಸಾಯ ಮಾಡಲು ಅನುಕೂಲವಾಗುತ್ತದೆ. ನಿಮ್ಮ ಮನೆಯವರು ನೆಮ್ಮದಿಯಾಗಿ ಜೀವನ ನಡೆಸುತ್ತಾರೆ’ ಎಂದು ಹೇಳಿದರು.

‘ಶಾಲೆ ತೆರದಿಲ್ಲ, ಈಗ ಏನು ಮಾಡುತ್ತಿದ್ದೀರಿ’ ಎಂದು ಮಕ್ಕಳನ್ನು ಪ್ರಶ್ನಿಸಿದರು. ಅದಕ್ಕೆ ಮಕ್ಕಳು ‘ಸರ್ ಕೊರೊನಾ ಇದೆಯಲ್ಲ, ಏನ್ ಮಾಡುವುದಕ್ಕೂ ಭಯವಾಗುತ್ತಿದೆ’ ಎಂದರು. ಆಗ ಸಚಿವರು ‘ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಇರಬೇಕು. ಇನ್ನೂ ಸ್ವಲ್ಪ ದಿನ ಶಾಲೆಗಳು ಪ್ರಾರಂಭವಾಗುತ್ತವೆ. ಭಯಪಡಬೇಡಿ’ ಎಂದು ವಿಶ್ವಾಸ ಮೂಡಿಸಿದರು.

ಮುಖಂಡರಾದ ಜಿ.ಮಹದೇವಪ್ಪ, ಶಿವಪ್ಪ, ಗ್ರಾ.ಪಂ.ಮಾಜಿ ಸದಸ್ಯ ನಾಗಪ್ಪ, ಪಿಎಸ್ಐ ಉಮಾವತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.