ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲುಕೋಟೆ: 5ರಂದು ಸಹಸ್ರಕಳಶಾಭಿಷೇಕ

Last Updated 2 ಮಾರ್ಚ್ 2021, 3:37 IST
ಅಕ್ಷರ ಗಾತ್ರ

ಮೇಲುಕೋಟೆ: ಸಹಸ್ರ ಕಳಶಾ ಭಿಷೇಕಕ್ಕೆ ಮೇಲುಕೋಟೆ ಸಜ್ಜುಗೊಳ್ಳು ತ್ತಿದೆ. ಕೊರೊನಾದಿಂದಾಗಿ ಕಳೆದ ವರ್ಷ ವೈರಮುಡಿ ಜಾತ್ರಾ ಮಹೋತ್ಸವ ನಡೆಯದ ಕಾರಣ ಪ್ರಾಯಶ್ಚಿ ತಪೂರ್ವಕವಾಗಿ ಮಾರ್ಚ್‌ 5ರಂದು ಸಹಸ್ರಕಳಶಾಭಿಷೇಕ ನಡೆಯಲಿದೆ.

ಶ್ರೀದೇವಿ- ಭೂದೇವಿ, ಆಚಾರ್ಯ ರಾಮಾನುಜರೊಂದಿಗೆ ಉತ್ಸವಮೂರ್ತಿ ಚೆಲುವನಾರಾಯಣಸ್ವಾಮಿಗೆ ಸಹಸ್ರಾಭಿಷೇಕ ವಿಶೇಷ ಮಹೋತ್ಸವ ನಡೆಯಲಿದ್ದು, ದಾನಿ, ರಾಮಾನುಜರ ಸನ್ನಿಧಿ ಅರ್ಚಕ ವಿದ್ವಾನ್ ಬಿ.ವಿ ಆನಂದಾಳ್ವಾರ್ ಮೇಲುಸ್ತುವಾರಿಯಲ್ಲಿ ದೇಗುಲ ಸಜ್ಜುಗೊಳ್ಳುತ್ತಿದೆ.

ಈಶ್ವರಸಂಹಿತೆಯ ಪ್ರಕಾರ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದು, ಸಹಸ್ರ ಕಳಶಾಭಿಷೇಕ ದಂದು ಮೂಲಮೂರ್ತಿ ಶೆಲ್ವತಿರುನಾರಾಯಣ ನಿಗೆ ಕುಂಬಪ್ರೋಕ್ಷಣೆಯ ಮೂಲಕ ಅಭಿಷೇಕದ ವಿಧಿವಿಧಾನಗಳು ನಡೆಯಲಿವೆ. ಅಂದು ಬೆಳಿಗ್ಗೆ 8 ಗಂಟೆಯಿಂದ ಸಹಸ್ರಕಳಶಾಭಿಷೇಕದ ಕೈಂಕರ್ಯಗಳು ಆರಂಭವಾಗಲಿದೆ. ಅಮ್ಮನವರ ಸನ್ನಿಧಿಯ ಬಳಿ ಶ್ರೀದೇವಿ ಭೂದೇವಿ ಹಾಗೂ ರಾಮಾನುಜಾಚಾರ್ಯರ, ಆಳ್ವಾರು ಗಳೊಂದಿಗೆ ಉತ್ಸವಮೂರ್ತಿ ಚೆಲುವನಾರಾಯಣನಿಗೆ ಸಾವಿರ ಕಳಸಗಳು, ಮಂಗಳದ್ರವ್ಯಗಳು, ವಿಶೇಷ ಪುಷ್ಪಹಾರಗಳಿಂದ ಅಭಿಷೇಕ ನೆರವೇರಲಿದೆ. 25 ಬಾರಿ ತಿರುವಾರಾಧನ ನಡೆಯಲಿದೆ. ದೇವಾಲಯದ ಆವರಣವನ್ನು ತಳಿರು– ತೋರಣ, ಚಪ್ಪರ ಹಾಗೂ ವಿವಿಧ ಪುಷ್ಪಗಳಿಂದ ಶೃಂಗರಿಸಲಾಗುತ್ತಿದೆ.

ಮಾರ್ಚ್‌ 3ರಿಂದಲೇ ಆರಂಭವಾಗುವ ಧಾರ್ಮಿಕ ಕೈಂಕರ್ಯಗಳು ಮಾರ್ಚ್‌ 6ರವರೆಗೆ ನೆರವೇರಲಿದೆ. ಮಾರ್ಚ್‌ 3ರಂದು ಅಂಕುರಾರ್ಪಣ, 4ರಂದು ಕಳಶಪ್ರತಿಷ್ಠೆ, 6ರಂದು ಅನ್ನಕೋಟಿ ಕಾರ್ಯಕ್ರಮ ನಡೆಯಲಿದೆ. ಆಗಮ ಪಂಡಿತ ವಿಜಯಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಧಾರ್ಮಿಕ ಕೈಂಕರ್ಯಗಳನ್ನು ನಿಗದಿ ಮಾಡಲಾಗಿದೆ. ಅದರಂತೆ ದೇವಾಲಯದಲ್ಲಿ ವಿದಿವಿಧಾನಗಳು ನಡೆಯಲಿದ್ದು, ಜಿಲ್ಲಾಧಿಕಾರಿ ಆದೇಶದಂತೆ ದಾನಿಗಳಾದ ಬಿ.ವಿ.ಆನಂದಾಳ್ವಾರ್ ಸಹಸ್ರಕಳಶಾಭಿಷೇಕಕ್ಕೆ ಬೇಕಾದ ವ್ಯವಸ್ಥೆ ಮಾಡಿದ್ದಾರೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಂಗಳಮ್ಮ ತಿಳಿಸಿದ್ದಾರೆ.

ಸಹಸ್ರ ಕಳಶಾಭಿಷೇಕ ಕಾರ್ಯ ಕ್ರಮಗಳು: ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಮಾರ್ಚ್‌ 5ರಂದು ಬೆಳಿಗ್ಗೆ ನಿತ್ಯಪೂಜೆ ಚತುಸ್ಥಾನಾರ್ಚನೆ, ನಿತ್ಯಹೋಮ, ಮಹಾಪೂರ್ಣಾಹುತಿ, ಪುಣ್ಯಾಹವಾಚನ, ಕಳಶಗಳಿಗೆ ಪೂಜೆ, ಚೆಲುವನಾರಾಯಣಸ್ವಾಮಿಗೆ ತಿರುವಾರಾಧನೆ, ನೈವೇದ್ಯ, ಪ್ಯೂಹಗಳ ಅಭಿಷೇಕ, ಅಂತರಾನಂತ ಶುದ್ಧೋದಕ ಅಭಿಷೇಕ, ಹರಿದ್ರಾಚೂರ್ಣಾ ಭಿಷೇಕ, ಮಹಾಕುಂಭ ಶಾಂತಿಘಟದ ಅಭಿಷೇಕ ಕೊನೆಗೆ ಏಕಾಂತ ಅಭಿಷೇಕ ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿ ಸಹಸ್ರಕಳಶಾಭಿಷೇಕ ಮುಕ್ತಾಯವಾಗುವವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT