ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಸ್ಥಿಯನ್ನು ಸಮೀಪದ ಪಶ್ಚಿಮ ವಾಹಿನಿ ಬಳಿ ಶ್ರೀಕೃಷ್ಣ ದೇವಾಲಯ ಎದುರು ಕಾವೇರಿ ನದಿಯಲ್ಲಿ ಭಾನುವಾರ ವಿಸರ್ಜಿಸಲಾಯಿತು.

ಕೃಷ್ಣ ಅವರ ಮೊಮ್ಮಗ ಅಮರ್ತ್ಯ ಹೆಗಡೆ ವೈದಿಕರ ಸಲಹೆಯಂತೆ ಬೆಳಿಗ್ಗೆ 11.30ಕ್ಕೆ ಅಸ್ಥಿಯನ್ನು ನದಿಯಲ್ಲಿ ವಿಸರ್ಜಿಸಿದರು. ಜ್ಯೋತಿಷಿ ವಿ. ಭಾನುಪ್ರಕಾಶ್ ಶರ್ಮಾ ಮತ್ತು ವೈದಿಕ ಕೆ.ಎಸ್. ಲಕ್ಷ್ಮೀಶ್ ಶರ್ಮಾ ಪಂಚಗವ್ಯ, ಅಸ್ಥಿ ಸಂಗ್ರಹ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಸೇರಿದಂತೆ ವಿಧಿ–ವಿಧಾನಗಳನ್ನು ನೆರವೇರಿಸಿದರು.

ಕೃಷ್ಣ ಅವರ ಬಂಧುಗಳು ಅಸ್ಥಿ ಕುಡಿಕೆಗೆ ಹಾಲು, ತುಪ್ಪ ಹಾಕಿದರು. ಬಳಿಕ ನದಿಯಲ್ಲಿ ಅಸ್ಥಿ ಸಂಚಯನ ನಡೆಯಿತು. ಎಸ್.ಎಂ. ಕೃಷ್ಣ ಅವರ ಮಕ್ಕಳಾದ ಮಾಳವಿಕಾ ಮತ್ತು ಶಾಂಭವಿ, ಅಮರ್ತ್ಯ ಹೆಗಡೆ ಅವರ ಪತ್ನಿ ಐಶ್ವರ್ಯಾ ಹೆಗಡೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.