ವಿಧಾನ ಪರಿಷತ್ ಉಪ-ಚುನಾವಣೆ: ವಿಜಯಪುರ-ಬಾಗಲಕೋಟೆಯಲ್ಲಿ ಮತದಾನ

7

ವಿಧಾನ ಪರಿಷತ್ ಉಪ-ಚುನಾವಣೆ: ವಿಜಯಪುರ-ಬಾಗಲಕೋಟೆಯಲ್ಲಿ ಮತದಾನ

Published:
Updated:

ವಿಜಯಪುರ: ವಿಜಯಪುರ-ಬಾಗಲಕೋಟೆ ಜಿಲ್ಲೆಗಳಲ್ಲಿ ಇಂದು ವಿಧಾನ ಪರಿಷತ್ ಉಪ-ಚುನಾವಣೆ ಮತದಾನ ನಡೆದಿದೆ.

 ಬೆಳಿಗ್ಗೆ 8 ಗಂಟೆಗೆ ಮತದಾನ ಶುರುವಾಗಿದ್ದು, ಬಿಜೆಪಿ ಅಭ್ಯರ್ಥಿ ಗೂಳಪ್ಪ ಶಟಗಾರ್ ತಮ್ಮ ಹಕ್ಕು ಚಲಾಯಿಸಿದ್ದಾರೆ. ಬೆಂಬಲಿಗರ ಜತೆಗೆ ಜಿಲ್ಲಾ ಪಂಚಾಯ್ತಿ ಮತಗಟ್ಟೆಗೆ ಬಂದ ಗೂಳಪ್ಪ ಸಿದ್ದಪ್ಪ ಶಟಗಾರ್ ಮತ ಚಲಾಯಿಸಿದರು.

ಸಾಯಂಕಾಲ 4 ಗಂಟೆಯವರೆಗೂ ಮತದಾನ ನಡೆಯಲಿದ್ದು, 16 ಅತಿಸೂಕ್ಷ್ಮ , 14 ಸೂಕ್ಷ್ಮ ಹಾಗೂ 8 ಸಾಧಾರಣ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅವಳಿ ಜಿಲ್ಲೆಗಳಲ್ಲಿ ಒಟ್ಟು 8237 ಮತದಾರರಿದ್ದು, 7 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 4074 ಪುರುಷ, 4163 ಮಹಿಳಾ ಮತದಾರರಿದ್ದಾರೆ.

ವಿಜಯಪುರ ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿನ ಮತಗಟ್ಟೆಯಲ್ಲಿ ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಮತ ಚಲಾಯಿಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !