ಮಂಗಳವಾರ, ನವೆಂಬರ್ 24, 2020
21 °C
ಗ್ರಾಮ ಪಂಚಾಯಿತಿ ಚುನಾವಣೆ: ಮೈಸೂರು ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

414 ಹೆಚ್ಚುವರಿ ಮತಗಟ್ಟೆ: ಅಧಿಕಾರಿ ನೇಮಕ

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಜಿಲ್ಲೆಯ 266 ಗ್ರಾಮ ಪಂಚಾಯಿತಿಯ ಸದಸ್ಯ ಸ್ಥಾನ ಗಳಿಗೆ ಸ್ಪರ್ಧಿಸಲು ಆಕಾಂಕ್ಷಿಗಳು ಒಂದೆಡೆ ತೆರೆಮರೆಯ ಕಸರತ್ತಿನಲ್ಲಿ ತಲ್ಲೀನರಾಗಿದ್ದರೆ; ಮತ್ತೊಂದೆಡೆ ಚುನಾವಣೆ ನಡೆಸಲು ಜಿಲ್ಲಾಡಳಿತವೂ ಸಜ್ಜುಗೊಂಡಿದೆ.

ಮತದಾರರ ಪಟ್ಟಿ ಅಂತಿಮ ಗೊಂಡಿದೆ. ಬ್ಲಾಕ್‌ವಾರ್ ಮೀಸಲಾತಿ ನಿಗದಿಯಾಗಿದೆ. ಪ್ರಪತ್ರ ನಮೂನೆಗಳನ್ನು ಆಯಾ ತಾಲ್ಲೂಕುಗಳ ತಹಶೀಲ್ದಾರ್ ಕಚೇರಿಯ ಚುನಾವಣಾ ಶಾಖೆಗೆ ಈಗಾಗಲೇ ಕಳುಹಿಸಿಕೊಡಲಾಗಿದೆ.

ಮತಗಟ್ಟೆವಾರು ಚುನಾವಣಾಧಿ ಕಾರಿ/ಸಹಾಯಕ ಚುನಾವಣಾಧಿಕಾರಿ ನೇಮಕ ಪ್ರಕ್ರಿಯೆಯೂ ನಡೆದಿದೆ. ಚುನಾವಣೆಗೆ ಸಂಬಂಧಿಸಿದ ತರಬೇತಿ ನೀಡುವುದು ಬಾಕಿ ಉಳಿದಿದೆಯಷ್ಟೇ. ತಂತ್ರಾಂಶದ ಸಾಫ್ಟ್‌ವೇರ್‌ನಲ್ಲಿ ದೋಷ ಸರಿಯಾದರೆ, ಮುಂದಿನ ವಾರದಲ್ಲಿ ತರಬೇತಿಯೂ ನಡೆಯಲಿದೆ ಎಂದು ಜಿಲ್ಲಾ ಚುನಾವಣಾ ಶಾಖೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಹೆಚ್ಚುವರಿ ಮತಗಟ್ಟೆ–ಸಿಬ್ಬಂದಿ: ‘ಈ ಹಿಂದೆ 1,500 ಮತದಾರರಿಗೆ ಒಂದು ಮತಗಟ್ಟೆಯಿತ್ತು. ಕೋವಿಡ್‌ ಮಾರ್ಗಸೂಚಿ ಪಾಲನೆಗಾಗಿ ಮತದಾರರ ಸಂಖ್ಯೆಯನ್ನು 1 ಸಾವಿರಕ್ಕೆ ನಿಗದಿ ಪಡಿಸಿಕೊಂಡು ಮತಗಟ್ಟೆ ರಚಿಸಲಾಗಿದೆ. ಇದರಿಂದ ಜಿಲ್ಲೆಯಲ್ಲಿ 414 ಹೆಚ್ಚುವರಿ ಮತಗಟ್ಟೆ ಸ್ಥಾಪಿಸಬೇಕಿದೆ. ಇದಕ್ಕೆ ಆಯೋಗದಿಂದ ಅನುಮೋದನೆಯೂ ಸಿಕ್ಕಿದೆ. ಮಸ್ಟರಿಂಗ್‌–ಡಿ ಮಸ್ಟರಿಂಗ್‌ ಕೇಂದ್ರಗಳಲ್ಲಿ ಜನದಟ್ಟಣೆ ಹೆಚ್ಚದಂತೆ ಕ್ರಮ ಕೈಗೊಳ್ಳಲು ಸೂಚನೆ ಬಂದಿದೆ. ಹೆಚ್ಚುವರಿ ಸಿಬ್ಬಂದಿ ನೇಮಕ ಪ್ರಕ್ರಿಯೆ ನಡೆದಿದೆ’ ಎಂದು ಹೆಚ್ಚು ವರಿ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜು ನಾಥಸ್ವಾಮಿ ಮಾಹಿತಿ ನೀಡಿದರು.

‘ಗ್ರಾಮ ಪಂಚಾಯಿತಿಗಳ ಕಂಪ್ಯೂಟರ್‌ ಆಪರೇಟರ್‌ಗಳಿಗೆ ಈಗಾಗಲೇ ಚುನಾವಣೆ ಸಂಬಂಧಿತ ತರಬೇತಿ ನೀಡಲಾಗಿದೆ. ಉಪ ವಿಭಾ ಗಾಧಿಕಾರಿಗಳು, ತಹಶೀಲ್ದಾರ್‌ ಗಳಿಗೆ ಮಾಹಿತಿ, ಅಗತ್ಯ ತರಬೇತಿ ನೀಡಲಾಗಿದೆ. ಇವರು ಆಯಾ ತಾಲ್ಲೂಕು ಹಂತದಲ್ಲಿ ಚುನಾವಣಾ ಸಿಬ್ಬಂದಿಗೆ ತರಬೇತಿ ನೀಡಲಿದ್ದಾರೆ. ಆಯೋಗದಿಂದ ಆದೇಶ ಹೊರ ಬೀಳುತ್ತಿದ್ದಂತೆ, ತರಬೇತಿ ಪ್ರಕ್ರಿಯೆ ನಡೆಯಲಿದೆ’ ಎಂದು ಎಡಿಸಿ ತಿಳಿಸಿದರು.

‘ಆದೇಶದ ಬಳಿಕ ಕೈ ಬಿಡಲಾಗುವುದು’

ಇದೀಗ ಜಿಲ್ಲೆಯಲ್ಲಿನ 266 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸುವ ಪ್ರಕ್ರಿಯೆ ನಡೆದಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಮ್ಮ ಜಿಲ್ಲೆಯ ಕೆಲವು ಗ್ರಾಮ ಪಂಚಾಯಿತಿಗಳು ಪಟ್ಟಣ ಪಂಚಾಯಿತಿ, ನಗರಸಭೆಯಾಗಿ ಮೇಲ್ದರ್ಜೆಗೇರಿವೆ.

ಇದಕ್ಕೆ ಸಂಬಂಧಿಸಿದ ಆದೇಶದ ಪ್ರತಿ ಲಭ್ಯವಾಗುತ್ತಿದ್ದಂತೆ, ಆ ಗ್ರಾಮ ಪಂಚಾಯಿತಿಗಳನ್ನು ಚುನಾವಣೆ ಪ್ರಕ್ರಿಯೆಯಿಂದ ಹೊರಗಿಡಲಾಗುವುದು ಎಂದು ಜಿಲ್ಲಾ ಚುನಾವಣಾ ಶಾಖೆಯ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.