ಮಹಿಳೆಯಿಂದ ₹12 ಸಾವಿರ ಲಂಚ ಪಡೆವ ವೇಳೆ ಎಸಿಬಿ ಬಲೆಗೆ ಬಿದ್ದ ಗ್ರಾ.ಪಂ ಕಾರ್ಯದರ್ಶಿ

7

ಮಹಿಳೆಯಿಂದ ₹12 ಸಾವಿರ ಲಂಚ ಪಡೆವ ವೇಳೆ ಎಸಿಬಿ ಬಲೆಗೆ ಬಿದ್ದ ಗ್ರಾ.ಪಂ ಕಾರ್ಯದರ್ಶಿ

Published:
Updated:

ಮೈಸೂರು: ಮಹಿಳೆಯೊಬ್ಬರಿಂದ ₹ 12 ಸಾವಿರ ಲಂಚ ತೆಗೆದುಕೊಳ್ಳುತ್ತಿದ್ದ ವೇಳೆ ಸಿದ್ದಲಿಂಗಪುರದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮಾರಪ್ಪ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಮಹಿಳೆಯೊಬ್ಬರಿಗೆ ನಿವೇಶನವೊಂದರ ಫಾರ್ಮ್‌ 11 (ಎ) ಕೊಡುವ ಸಂಬಂಧ ಮಾರಪ್ಪ ₹ 12 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನಂತರ, ಮಹಿಳೆಯು ಎಸಿಬಿ ಪೊಲೀಸರಿಗೆ ಈ ಕುರಿತು ದೂರು ನೀಡಿದರು. ಗುರುವಾರ ಬೆಳಿಗ್ಗೆ ಮಹಿಳೆಯಿಂದ ಲಂಚ ಪಡೆಯುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದರು.

ಎಸಿಬಿ ವಿಭಾಗದ ಎಸ್‌.ಪಿ.ಎಚ್.ಟಿ.ಶೇಖರ್, ಡಿವೈಎಸ್‌ಪಿ ಉಮೇಶ್‌ ಸೇಠ್, ಪೊಲೀಸ್‌ ಇನ್‌ಸ್ಪೆಕ್ಟರ್‌ಗಳಾದ ಶೇಖರ್ ಮತ್ತು ವಿನಯ್ ಕಾರ್ಯಾಚರಣೆಯಲ್ಲಿದ್ದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !