ಸವಾಲುಗಳನ್ನು ಧೈರ್ಯವಾಗಿ ಸ್ವೀಕರಿಸುವೆ: ಸಚಿವ ಜಿ.ಟಿ.ದೇವೇಗೌಡ

7
ಕೃಷಿಕ್ ಸರ್ವೋದಯ ಫೌಂಡೇಷನ್ ವತಿಯಿಂದ ನಡೆದ ಸನ್ಮಾನ ಕಾರ್ಯಕ್ರಮ

ಸವಾಲುಗಳನ್ನು ಧೈರ್ಯವಾಗಿ ಸ್ವೀಕರಿಸುವೆ: ಸಚಿವ ಜಿ.ಟಿ.ದೇವೇಗೌಡ

Published:
Updated:
Deccan Herald

ಮೈಸೂರು: ‘ಸವಾಲುಗಳಿಗೆ ಹೆದರುವವ ನಾನಲ್ಲ; ಎಂತಹ ಕಷ್ಟವೇ ಎದುರಾದರೂ ಧೈರ್ಯದಿಂದ ನನ್ನ ಜವಾಬ್ದಾರಿಗಳನ್ನು ನಿಭಾಯಿಸುವೆ’ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

ಕೃಷಿಕ್ ಸರ್ವೋದಯ ಫೌಂಡೇಷನ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸಂಸ್ಥೆಯ ಮೈಸೂರು ಶಾಖೆಯ ಸರ್ವ ಸದಸ್ಯರ, ಹಿತೈಷಿಗಳ ಸ್ನೇಹ ಕೂಟ ಮತ್ತು ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು

‘ನಾನು ಶಿಕ್ಷಣ ಸಚಿವನಾದ ಬಳಿಕ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೇನೆ. ಇದು ಕೇಳದೇ ಸಿಕ್ಕಿದ ಅವಕಾಶ. ನನ್ನ ಕ್ಷೇತ್ರದ ಜನರ ಒತ್ತಾಸೆಯ ಮೇರೆಗೆ ನಾನು ಸಚಿವನಾಗಿ ಅಧಿಕಾರ ಸ್ವೀಕರಿಸಿದೆ. ಜಿಲ್ಲಾ ಉಸ್ತುವಾರಿಯ ಜವಾಬ್ದಾರಿಯೂ ಸಿಕ್ಕಿದೆ. ಮೈಸೂರಿನಲ್ಲಿ ಈ ನಡುವೆ ಜವಾಬ್ದಾರಿಗಳ ಸರಮಾಲೆಗಳೇ ಬರುತ್ತಿವೆ. ಆದರೆ, ಅವೆಲ್ಲವನ್ನೂ ಸಮರ್ಥವಾಗಿ ನಿಭಾಯಿಸುವೆ’ ಎಂದರು.

‘ಪೌರಕಾರ್ಮಿಕರು ಒಂದು ವಾರದಿಂದ ಧರಣಿಯಲ್ಲಿ ನಿರತರಾಗಿದ್ದಾರೆ. ದಸರೆ ಸಮೀಪಿಸುತ್ತಿದೆ. ಇದನ್ನು ಬಗೆಹರಿಸುವ ಗುರುತರ ಜವಾಬ್ದಾರಿ ನನ್ನ ಮೇಲಿದೆ. ಅಲ್ಲದೇ, ಮೈಸೂರು ವಿ.ವಿ.ಯಲ್ಲಿ ಸೌಲಭ್ಯ ಕೋರಿ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ತಾತ್ಕಾಲಿಕ ನೌಕರರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಇವರೆಲ್ಲರಿಗೂ ನ್ಯಾಯ ದೊರಕಿಸಿಕೊಡುವೆ. ಅದೇ ನನ್ನ ಆದ್ಯತೆ’ ಎಂದು ಹೇಳಿದರು.

ಲಕ್ಷಗಟ್ಟಲೇ ಸಂಬಳ ಪಡೆಯುವ ವಿ.ವಿ.ಗಳ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠ ಮಾಡುತ್ತಿಲ್ಲ. ಇದರಿಂದ ನನಗೆ ಬೇಸರವಾಗಿದೆ. 5 ಹಳ್ಳಿಗಳನ್ನು ದತ್ತು ಸ್ವೀಕರಿಸುವಂತೆ ಹೇಳಿದ್ದರೂ ಅದರ ಪಾಲನೆಯಾಗಿಲ್ಲ. ಈ ಕುರಿತು ನನಗೆ ವಿಪರೀತ ಬೇಸರವಿದೆ ಎಂದರು.

ಇದೇ ವೇಳೆ ಸಚಿವರಾದ ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ ಅವರನ್ನು ಸನ್ಮಾನಿಸಲಾಯಿತು.

ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ಫೌಂಡೇಷನ್‌ ಅಧ್ಯಕ್ಷ ಟಿ.ತಿಮ್ಮೇಗೌಡ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !