ಅಭಿವೃದ್ಧಿ, ನಿರ್ವಹಣೆಗೆ ಹಲವು ಕೋಟಿ ಖರ್ಚು

ಸೋಮವಾರ, ಮೇ 20, 2019
29 °C

ಅಭಿವೃದ್ಧಿ, ನಿರ್ವಹಣೆಗೆ ಹಲವು ಕೋಟಿ ಖರ್ಚು

Published:
Updated:

ಮೈಸೂರು ಮಹಾನಗರ ಪಾಲಿಕೆ ಮಾತ್ರವಲ್ಲ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಕೂಡಾ ನಗರದ ಕೆಲವು ಉದ್ಯಾನಗಳ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದೆ. ಪಾಲಿಕೆ ಹಾಗೂ ಮುಡಾ ಪ್ರತಿ ಬಜೆಟ್‌ನಲ್ಲಿ ಹಲವು ಕೋಟಿ ರೂಪಾಯಿ ಮೊತ್ತವನ್ನು ಉದ್ಯಾನಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಮೀಸಲಿಡುತ್ತವೆ. ಆದರೆ ಆ ಹಣ ಎಷ್ಟರಮಟ್ಟಿಗೆ ಬಳಕೆಯಾಗುತ್ತಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಪಾಲಿಕೆಯು ಕಳೆದ ಹಲವು ವರ್ಷಗಳಿಂದ ಹಂತಹಂತವಾಗಿ ಉದ್ಯಾನಗಳ ಅಭಿವೃದ್ಧಿ ಮಾಡುತ್ತಾ ಬಂದಿದೆ. ಪಾಲಿಕೆ ವ್ಯಾಪ್ತಿಯಲ್ಲಿರುವ ಸುಮಾರು 175 ಉದ್ಯಾನಗಳ ಅಭಿವೃದ್ಧಿ ಕೆಲಸ ನಡೆದಿದೆ. ಪ್ರತಿ ವರ್ಷ ಬಜೆಟ್‌ನಲ್ಲಿ ಇಂತಿಷ್ಟು ಹಣವನ್ನು ಅಭಿವೃದ್ಧಿ ಕಾಮಗಾರಿಗೆ ಮೀಸಲಿಡಲಾಗುತ್ತದೆ.

ಮುಡಾ ನಿರ್ಮಿಸಿರುವ ಬಡಾವಣೆ ಗಳಲ್ಲಿ (ಪಾಲಿಕೆಗೆ ಹಸ್ತಾಂತರಿಸದೇ ಇರುವ ಬಡಾವಣೆಗಳು) ಒಟ್ಟು 156 ಉದ್ಯಾನಗಳು ಇವೆ. ಈ ಉದ್ಯಾನಗಳಲ್ಲಿ ಕೆಲವನ್ನು ಮಾತ್ರ ಅಭಿವೃದ್ಧಿಪಡಿಸಲಾಗಿದೆ. ವಿವಿಧ ಕಾರಣಗಳಿಂದ ಇನ್ನುಳಿದ ಉದ್ಯಾನಗಳ ಅಭಿವೃದ್ಧಿ ಕೆಲಸ ನನೆಗುದಿಗೆ ಬಿದ್ದಿದೆ.

ಉದ್ಯಾನಗಳ ನಿರ್ವಹಣೆಗೆ ಮುಡಾದಲ್ಲಿ ಸಿಬ್ಬಂದಿ ಇಲ್ಲ. ಆದ್ದರಿಂದ ಖಾಸಗಿಯವರು ಮತ್ತು ಸಂಘ ಸಂಸ್ಥೆಗಳು ಮುಂದೆ ಬಂದಲ್ಲಿ ಉದ್ಯಾನಗಳನ್ನು ಅಭಿವೃದ್ಧಿಪಡಿಸಲು ಪ್ರಾಧಿಕಾರ ತೀರ್ಮಾನಿಸಿದೆ. ಇದಕ್ಕಾಗಿ 2019–20ರ ಸಾಲಿನ ಬಜೆಟ್‌ನಲ್ಲಿ ₹ 5 ಕೋಟಿ ಮೊತ್ತ ಕಾಯ್ದಿರಿಸಿದೆ.

ಪ್ರಾಧಿಕಾರವು ಅಭಿವೃದ್ಧಿಪಡಿಸಿದ ಉದ್ಯಾನಗಳ ನಿರ್ವಹಣೆಯನ್ನು ಆಸಕ್ತ ಕಂಪನಿಗಳು ಮತ್ತು ಸಂಘ ಸಂಸ್ಥೆಗಳಿಗೆ ವಹಿಸುತ್ತದೆ. ಆದರೆ ಕಂಪನಿಗಳು ಮತ್ತು ಸಂಘ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರುತ್ತಿಲ್ಲ. ಇದರಿಂದ ಉದ್ಯಾನ ಅಭಿವೃದ್ಧಿ ಕೆಲಸಕ್ಕೆ ಹಿನ್ನಡೆಯಾಗಿದೆ. ಸಂಘ ಸಂಸ್ಥೆಗಳು ಆಸಕ್ತಿಯಿಂದ ನಿರ್ವಹಣೆ ಮಾಡಿದರೆ ಅಂತಹ ಉದ್ಯಾನಗಳು ವರ್ಷವಿಡೀ ಹಸಿರಿನಿಂದ ನಳನಳಿಸುತ್ತವೆ. ಗಿಡಗಳಿಗೆ ಸಮರ್ಪಕವಾಗಿ ನೀರು ಹಾಕದೇ ಇದ್ದರೆ ನಿಧಾನವಾಗಿ ಕಳೆಗುಂದುತ್ತವೆ.

ಖಾಸಗಿ ಬಡಾವಣೆಗಳಲ್ಲಿ ನಿರ್ಮಿಸಿರುವ ಉದ್ಯಾನಗಳ ಅಭಿವೃದ್ಧಿಗೆ ಮುಡಾ ಕಳೆದ ವರ್ಷ ₹ 1.76 ಕೋಟಿ ಮೊತ್ತವನ್ನು ಮೀಸಲಿರಿಸಿತ್ತು. ಅಲ್ಲದೆ ಆಯ್ದ ಉದ್ಯಾನಗಳನ್ನು ಹೈಟೆಕ್‌ ಉದ್ಯಾನಗಳನ್ನಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿತ್ತು. ಇದಕ್ಕಾಗಿ ಬಜೆಟ್‌ನಲ್ಲಿ ₹ 1.50 ಕೋಟಿ ಮೀಸಲಿಡಲಾಗಿತ್ತು. ಆದರೆ ಹೈಟೆಕ್‌ ಉದ್ಯಾನಗಳನ್ನಾಗಿ ಅಭಿವೃದ್ಧಿಪಡಿಸುವ ಯೋಜನೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !