ರತ್ನಖಚಿತ ಸಿಂಹಾಸನ ಜೋಡಣೆ

7

ರತ್ನಖಚಿತ ಸಿಂಹಾಸನ ಜೋಡಣೆ

Published:
Updated:

ಮೈಸೂರು: ದಸರಾ ಮಹೋತ್ಸವದ ಖಾಸಗಿ ದರ್ಬಾರಿಗೆ ಅಂಬಾವಿಲಾಸ ಅರಮನೆಯಲ್ಲಿ ಸಿದ್ಧತೆಗಳು ಭರದಿಂದ ನಡೆಯುತ್ತಿದ್ದು, ರತ್ನಖಚಿತ ಸಿಂಹಾಸನದ ಜೋಡಣೆ ಕೆಲಸ ಗುರುವಾರ ನಡೆಯಿತು.

ಅರಮನೆಯ ಭದ್ರತಾ ಕೊಠಡಿಯಲ್ಲಿದ್ದ ಸಿಂಹಾಸನದ 13 ಬಿಡಿಭಾಗಗಳನ್ನು ಬಿಗಿ ಭದ್ರತೆಯಲ್ಲಿ ದರ್ಬಾರ್‌ ಸಭಾಂಗಣಕ್ಕೆ ತರಲಾಯಿತು. ಅರಮನೆಯ ಸಿಬ್ಬಂದಿ ಹಾಗೂ ಗೆಜ್ಜಹಳ್ಳಿ ಗ್ರಾಮದ ಕುಶಲಕರ್ಮಿಗಳು ಬೆಳಿಗ್ಗೆ 10 ಗಂಟೆಗೆ ಜೋಡಣೆ ಆರಂಭಿಸಿದರು. ಮಧ್ಯಾಹ್ನದ ವೇಳೆಗೆ ಜೋಡಣೆ ಪೂರ್ಣಗೊಂಡಿತು.

ಭದ್ರತೆಯ ದೃಷ್ಟಿಯಿಂದ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1ರ ವರೆಗೆ ಅರಮನೆಯ ದರ್ಬಾರ್‌ ಹಾಲ್‌ಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು. ಸಿಸಿಟಿವಿ ಕ್ಯಾಮೆರಾಗಳಿಗೂ ಈ ಸಂದರ್ಭ ಪರದೆ ಹಾಕಿ ಮುಚ್ಚಲಾಗಿತ್ತು. ಸಿಂಹಾಸನ ಜೋಡಣೆ ಕಾರ್ಯದಲ್ಲಿ ಪಾಲ್ಗೊಂಡವರಿಗೆ ಮೊಬೈಲ್‌ ಫೋನ್‌ ಬಳಸಲು ಅವಕಾಶವಿರಲಿಲ್ಲ.

ಇದೇ ವೇಳೆ ಭದ್ರಾಸನವನ್ನು ಅರಮನೆಯ ಕನ್ನಡಿ ತೊಟ್ಟಿಯಲ್ಲಿ ಜೋಡಿಸಲಾಯಿತು. ಇದಕ್ಕೂ ಮುನ್ನ ದರ್ಬಾರ್‌ ಸಭಾಂಗಣದಲ್ಲಿ ಚಾಮುಂಡೇಶ್ವರಿ ದೇವಿಗೆ ಪೂಜೆ ನೆರವೇರಿತು. ಅರಮನೆಯ ಖಾಸಗಿ ದರ್ಬಾರ್‌ ಕಾರ್ಯಕ್ರಮಗಳು ಅಕ್ಟೋಬರ್‌ 10 ರಿಂದ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !