ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಂಚಿನ ನೋಂದಣಿ ಅಭಿಯಾನ 8ಕ್ಕೆ

Last Updated 6 ಏಪ್ರಿಲ್ 2018, 8:43 IST
ಅಕ್ಷರ ಗಾತ್ರ

ರೋಣ: ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಚುನಾವಣಾ ಆಯೋಗವು ಮಿಂಚಿನ ನೋಂದಣಿ ಅಭಿಯಾನ ಹಮ್ಮಿಕೊಂಡಿದೆ. ಇದೇ 8ರಂದು ಎಲ್ಲಾ ಮತಗಟ್ಟೆಗಳಲ್ಲೂ ಅಭಿಯಾನ ನಡೆಯಲಿದೆ. ಅರ್ಹರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಹಶೀಲ್ದಾರ್‌ ಶಿವಲಿಂಗಪ್ರಭು ವಾಲಿ ಹೇಳಿದರು.

ಅಂದು ಮತಗಟ್ಟೆ ಅಧಿಕಾರಿಗಳು ಆಯಾ ಮತಗಟ್ಟೆಯಲ್ಲಿ ಹಾಜರಿದ್ದು ಅರ್ಜಿ ಪಡೆದು ಅಲ್ಲೇ ಪರಿಶೀಲಿಸಿ ತಕ್ಷಣ ಹೆಸರು ಸೇರಿಸಲಿದ್ದಾರೆ. ಹೀಗಾಗಿ ಈ ದಿನವನ್ನು ವಿಶೇಷ ನೋಂದಣಿ ಆಂದೋಲನ ದಿನವೆಂದು ಪರಿಗಣಿಸಲಾಗಿದೆ ಎಂದರು.ಪಟ್ಟಣದ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ರೋಣ ಮತಕ್ಷೇತ್ರದ ಬೂತ್‌ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಫೆ.28ರವರೆಗೆ 25344 ಹೊಸ ಮತದಾರರನ್ನು ಪಟ್ಟಿಗೆ ಸೇರಿಸಲಾಗಿದೆ.ಇದರಲ್ಲಿ 13672 ಪುರುಷರು, 11670 ಮಹಿಳೆಯರು, 4 ಇತರರು ಇದ್ದಾರೆ. ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದುಕೊಳ್ಳುವ ಏ.24 ರವರೆಗೂ ಹೆಸರು ಸೇರ್ಪಡೆಗೆ ಅವಕಾಶವಿದೆ. ಅಲ್ಲಿಯವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಸಾದ್ಯವಿದೆಯಾದರೂ ಏ.14ರೊಳಗೆ ಹೆಸರು ಸೇರಿಸಿದರೆ ಮಾತ್ರ ಈ ಬಾರಿ ಮತದಾನ ಮಾಡಲು ಅವಕಾಶ ಸಿಗಲಿದೆ ಎಂದು ಅವರು ವಿವರಿಸಿದರು. ಹೀಗಾಗಿ 8ರಂದು 18 ವರ್ಷ ತುಂಬಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗದೇ ಉಳಿದವರು ತಮ್ಮ ಹೆಸರನ್ನು ನೋಂದಾಯಿಸಲು ಅಗತ್ಯ ದಾಖಲೆಗಳೊಂದಿಗೆ ಮತಗಟ್ಟೆ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದರು.

25344 ಮತದಾರರು ಸೇರ್ಪಡೆ: 2013ರ ಚುನಾವಣೆಯಲ್ಲಿ 99634 ಪುರುಷರು, 95702 ಮಹಿಳೆಯರು ಸೇರಿ ಒಟ್ಟು 195336 ಮತದಾರರಿದ್ದರು, ಈ ಬಾರಿ 25344 ಮತದಾರರನ್ನು ಸೇರ್ಪಡೆ ಮಾಡಿದ್ದು ಈ ಬಾರಿ ಸದ್ಯ 2,20,680 ಮತದಾರಿದ್ದಾರೆ. ಇನ್ನೂ ಸೇರ್ಪಡೆಗೆ ಅವಕಾಶವಿದೆ. ಇವರಿಗಾಗಿ ಇದ್ದ 258 ಮತಗಟ್ಟೆಗಳನ್ನು 265ಕ್ಕೆ ಏರಿಸಲಾಗಿದೆ ಎಂದರು.

ಮತಕ್ಷೇತ್ರದ ವ್ಯಾಪ್ತಿಯಲ್ಲಿ ತಾಲ್ಲೂಕಿನ ಗಜೇಂದ್ರಗಡ, ನರೇಗಲ್ ಪಟ್ಟಣಗಳು ಸೇರಿ 65 ಗ್ರಾಮಗಳು, ಗದಗ ತಾಲ್ಲೂಕಿನ 5 ಗ್ರಾಮಗಳು, ಮುಂಡರಗಿ ತಾಲ್ಲೂಕಿನ ಡಂಬಳ ಹೊಬಳಿಯ 28 ಗ್ರಾಮಗಳು ಸೇರ್ಪಡೆಯಾಗಿದ್ದು ವಿಶಾಲ ಮತಕ್ಷೇತ್ರವಾಗಿದ್ದು ಚುನಾವಣೆಯ ಕಾರ್ಯಗಳು ಸುಸಜ್ಜಿತವಾಗಿ ನಡೆದಿವೆ ಎಂದು ಶಿವಶರಣಪ್ಪ ವಾಲಿ ತಿಳಿಸಿದರು.

ಐದು ಕಡೆಗಳಲ್ಲಿ ಚೆಕ್ ಪೋಸ್ಟ್‌: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ಅಕ್ರಮ ಚಟುವಟಿಕೆ, ಹಣ ಮತ್ತಿತರ ವಸ್ತುಗಳ ಸಾಗಾಟ ತಡೆಯುವ ಉದ್ದೇಶದಿಂದ ವಿಧಾನಸಭಾ ಕ್ಷೇತ್ರದ ಗಡಿಯಲ್ಲಿ ಐದು ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು 24 ಗಂಟೆಯೂ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಇವರೊಟ್ಟಿಗೆ 3 ವಿಡಿಯೋ ತಂಡ ರಚಿಸಲಾಗಿದೆ. ಇವರಿಗೆ ಕ್ಯಾಮೆರಾ ಮತ್ತು ವಾಹನಗಳನ್ನು ಒದಗಿಸಲಾಗಿದ್ದು ಕ್ಷೇತ್ರದಾದ್ಯಂತ ಸಂಚರಿಸಿ ಪರಿಶೀಲನೆ ನಡೆಸಲಾಗುತ್ತದೆ. ನೀತಿ ಸಂಹಿತೆ ಉಲ್ಲಂಘನೆ ಮತ್ತು ಚುನಾವಣಾ ಅಕ್ರಮವನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾ ಅಧಿಕಾರಿ ಚಳಗೇರಿ ಮಾತನಾಡಿದರು. ವಿವಿಧ ಇಲಾಖೆಯ ಅಧಿಕಾರಿಗಳು, ಮತಗಟ್ಟೆ ಅಧಿಕಾರಿಗಳು ಸೇರಿದಂತೆ ಚುನಾವಣಾ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT