ಸೂಪರ್‌ ಫಾಸ್ಟ್‌ ರೈಲಿಗೆ ದುಬಾರಿ ಶುಲ್ಕ

7
ಈ ರೈಲಲ್ಲಿ ಸಂಚರಿಸಬೇಕಾದರೆ ಹೆಚ್ಚುವರಿ ಹಣ ಪಾವತಿಸಬೇಕು!

ಸೂಪರ್‌ ಫಾಸ್ಟ್‌ ರೈಲಿಗೆ ದುಬಾರಿ ಶುಲ್ಕ

Published:
Updated:
Deccan Herald

ಮೈಸೂರು: ಇಂದಿನಿಂದ ಮೈಸೂರು– ಬೆಂಗಳೂರು ನಡುವೆ ಸಂಚರಿಸಲಿರುವ 8 ಸೂಪರ್ ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲುಗಳ ಟಿಕೆಟ್‌ ದುಬಾರಿಯಾಗಲಿದೆ. ಪ್ರಯಾಣಿಕರು ಹೆಚ್ಚುವರಿ ₹ 15 ನೀಡಿ ಪ್ರಯಾಣಿಸಬೇಕಿದೆ.

ಮೈಸೂರು– ಬೆಂಗಳೂರು ಭಾಗದ ಜನರ ಬಹುದಿನಗಳ ಬೇಡಿಕೆಯಂತೆ ನೈರುತ್ಯ ರೈಲ್ವೆಯು ರೈಲುಗಳ ವೇಗವರ್ದನೆಗೆ ಒಪ್ಪಿಗೆ ನೀಡಿದೆ. ಈ ಮಾರ್ಗವು ವಿದ್ಯುದೀಕರಣವಾದ ಮೇಲೂ ರೈಲುಗಳ ನಿಧಾನಗತಿಯಲ್ಲಿ ಸಂಚರಿಸುತ್ತಿವೆ ಎಂಬುದು ಪ್ರಯಾಣಿಕರ ಅಳಲಾಗಿತ್ತು.

ಅದರಂತೆ, ಆ. 15ರಿಂದ 8 ರೈಲುಗಳು ತಮ್ಮ ವೇಗ ಹೆಚ್ಚಿಸಿಕೊಳ್ಳುತ್ತಿವೆ. ಸಾಮಾನ್ಯ ಎಕ್ಸ್‌ಪ್ರೆಸ್‌ ರೈಲುಗಳ ಬೆಲೆ ₹ 60. ಈಗ ರೈಲುಗಳು ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ಎಂದು ಬದಲಾಗಿರುವ ಕಾರಣ, ಇದಕ್ಕಾಗಿ ಪ್ರಯಾಣಿಕರು ₹ 15 ಹೆಚ್ಚುವರಿಯಾಗಿ, ಅಂದರೆ ಒಟ್ಟು ₹ 75 ನೀಡಬೇಕಿದೆ. ₹ 60ರ ಟಿಕೆಟ್‌ ಪಡೆದು ಈ ರೈಲುಗಳಲ್ಲಿ ಸಂಚರಿಸಿದರೆ ಕಾನೂನುಕ್ರಮ ತೆಗೆದುಕೊಳ್ಳುವುದಾಗಿ ನೈರುತ್ಯ ರೈಲ್ವೆ ತಿಳಿಸಿದೆ.

ರೈಲುಗಳಾದ ಮೈಲದುತ್ತರೈ– ಮೈಸೂರು (16231), ಮೈಸೂರು– ಮೈಲದುತ್ತರೈ (16232), ಮೈಸೂರು– ಯಶವಂತಪುರ (16023), ಯಶವಂತಪುರ– ಮೈಸೂರು (16024), ಬೆಂಗಳೂರು–ಕಣ್ಣೂರು–ಕಾರವಾರ (16517/16523), ಕಣ್ಣೂರು–ಕಾರವಾರ–ಬೆಂಗಳೂರು (16518/16524), ಮೈಸೂರು– ಸಾಯಿನಗರ ಶಿರಡಿ (16217) ಹಾಗೂ ಸಾಯಿನಗರ ಶಿರಡಿ– ಮೈಸೂರು (16218) ರೈಲುಗಳನ್ನು ಸೂಪರ್‌ ಫಾಸ್ಟ್‌ (ಭಾಗಶಃ) ಎಂದು ಪಟ್ಟಿ ಮಾಡಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !