ಶುಕ್ರವಾರ, ಅಕ್ಟೋಬರ್ 18, 2019
20 °C
ಇಲವಾಲ ಹೋಬಳಿಯ ಮೈದನಹಳ್ಳಿಯಲ್ಲಿ ಘಟನೆ

ಆಸ್ತಿ ಕಲಹ; ಅಕ್ಕನನ್ನೇ ಕೊಂದ ತಮ್ಮ!

Published:
Updated:
prajavani

ಮೈಸೂರು: ತಾಲ್ಲೂಕಿನ ಮೈದನಹಳ್ಳಿಯಲ್ಲಿ ಆಸ್ತಿ ಕಲಹವು ವಿಕೋಪಕ್ಕೆ ತಿರುಗಿ ಮಂಜುನಾಥ್ (32) ತನ್ನ ಅಕ್ಕ ಸಣ್ಣಮ್ಮ (44) ಅವರನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.

ವಿಜಯದಶಮಿ ಹಬ್ಬಕ್ಕಾಗಿ ಮನೆಗೆ ಬಂದಿದ್ದ ಸಣ್ಣಮ್ಮ ಅವರೊಂದಿಗೆ ಮಂಜುನಾಥ್ ಹಾಗೂ ಈತನ ಪತ್ನಿ ಸೃಜನಾ ಆಸ್ತಿಯ ವಿಚಾರಕ್ಕೆ ಗಲಾಟೆ ಆರಂಭಿಸಿದ್ದಾರೆ. ಕೋಪದಲ್ಲಿ ಮಂಜುನಾಥ್ ದೊಣ್ಣೆಯಿಂದ ಹೊಡೆದಿದ್ದಾನೆ. ಏಟು ಕೆನ್ನೆಗೆ ಬಿದ್ದು ಸಣ್ಣಮ್ಮ ಮೃತಪಟ್ಟಿದ್ದಾರೆ. ಈ ಕುರಿತು ಮಂಜುನಾಥ್ ಹಾಗೂ ಈತನ ಪತ್ನಿ ಸೃಜನಾ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಲವಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿನ್ನಾಭರಣ ಕಳವು

ಶ್ರೀರಾಂಪುರದ ಸೂರ್ಯ ಬಡಾವಣೆಯಲ್ಲಿ ಲಕ್ಷ್ಮೀಶ ಎಂಬುವವರ ಮನೆಯ ಹಿಂಬಾಗಿಲನ್ನು ಮೀಟಿರುವ ಕಳ್ಳರು ₹ 2 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ.

ಮಂಗಳವಾರ ರಾತ್ರಿ ಇವರು ಮನೆಗೆ ಬೀಗ ಹಾಕಿಕೊಂಡು ಹೋಗಿ ಬುಧವಾರ ಬೆಳಿಗ್ಗೆ ಬಂದು ನೋಡಿದಾಗ ಮನೆಯ ಹಿಂಬಾಗಿಲು ಒಡೆದಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Post Comments (+)