ಭಾನುವಾರ, ಮೇ 9, 2021
18 °C
ಜಯಜಾಮರಾಜ ಒಡೆಯರ್ ಅವರ 99ನೇ ಜನ್ಮದಿನ ಕಾರ್ಯಕ್ರಮ

ಮೈಸೂರನ್ನು ಸಂಪದ್ಭರಿತವಾಗಿಸಿದ ಕೀರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರಿನ ನಜರಬಾದಿನ ವಾಣಿವಿಲಾಸ ಮಹಿಳಾ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಯಜಾಮರಾಜ ಒಡೆಯರ್ ಅವರ 99ನೇ ಜನ್ಮದಿನ ಕಾರ್ಯಕ್ರಮದಲ್ಲಿ ಒಡೆಯರ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ನಂಜುಂಡಸ್ವಾಮಿ, ಮಹಾಜನ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಭೀಮರಾಜ, ಬೋಧಕರಾದ ಭಾರತಿ, ಶ್ರೀಧರರಾಜ ಅರಸ್ ಇದ್ದಾರೆ

ಮೈಸೂರು: ದೇಶವೊಂದು ಆರ್ಥಿಕವಾಗಿ ಬೆಳೆದರೆ ಮಾತ್ರ ಸಾಲದು. ಕಲೆ, ಸಂಸ್ಕೃತಿ, ಸಾಹಿತ್ಯ ಕ್ಷೇತ್ರವು ಬಲಗೊಂಡರೆ ಆ ದೇಶ ಸಂಪದ್ಭರಿತವಾಗುತ್ತದೆ. ರಾಜತಾಂತ್ರಿಕತೆ ಸುಧಾರಿಸುತ್ತದೆ ಎನ್ನುವುದು ಚಾಮರಾಜ ಒಡೆಯರ್‌ ಅವರ ಆಶಯವಾಗಿತ್ತು ಎಂದು ಮಹಾಜನ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಭೀಮರಾಜ ತಿಳಿಸಿದರು.

ವಾಣಿವಿಲಾಸ ಅರಸು ಮಹಿಳಾ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಯಜಾಮರಾಜ ಒಡೆಯರ್ ಅವರ 99ನೇ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸ್ವತಃ ಗಾಯಕರೂ ಆಗಿದ್ದ ಒಡೆಯರ್ 20 ಸಾವಿರಕ್ಕೂ ಗೀತೆಗಳನ್ನು ಹಾಡಿದ್ದಾರೆ. ಸಂಸ್ಕೃತದ ತತ್ವಗಳನ್ನು ಕನ್ನಡಕ್ಕೆ ಭಾಷಾಂತರಿಸಲು ಅಪಾರ ಶ್ರಮ ವಹಿಸಿದ್ದರು. ಇಂದಿನ ಆಡಳಿತರಗಾರರು ಇದನ್ನು ಮಾದರಿಯನ್ನಾಗಿ ಸ್ವೀಕರಿಸಿ ದೇಶಕಟ್ಟುವ ಕೆಲಸಕ್ಕೆ ಅಣಿಯಾಗಬೇಕು ಎಂದು ಸಲಹೆ ನೀಡಿದರು.

ಸ್ವಾತಂತ್ರ್ಯಪೂರ್ವದಲ್ಲಿ ಮೈಸೂರು ಪ್ರಮುಖ ಸಾಮ್ರಾಜ್ಯವಾಗಿ ಬೆಳೆದಿತ್ತು. ಪ್ರಜೆಗಳ ಮೇಲಿನ ಮಮಕಾರ, ಆರ್ಥಿಕವಾಗಿ ದೇಶವನ್ನು ಕಟ್ಟಬೇಕು ಎಂಬ ಒಡೆಯರ್ ಅವರ ಛಲ ಇದಕ್ಕೆ ಕಾರಣವಾಗಿತ್ತು. ಕೃಷಿ ಕ್ಷೇತ್ರಕ್ಕೆ ಆದ್ಯತೆಯನ್ನು ನೀಡಿ ಅವರನ್ನು ಬೆಳೆಸಿದ್ದು ಅವರ ಸಮಾಜಪರತನವನ್ನು ತೋರುತ್ತದೆ. ಅರಣ್ಯ, ಜಲ, ಖನಿಜ, ಆರ್ಥಿಕತೆಯನ್ನು ಒಂದು ವೇದಿಕೆಗೆ ಸೇರಿಸಿ ಸಮಾಜವನ್ನು ಕಟ್ಟುವ ಕೆಲಸ ಆಗಬೇಕು ಎಂದು ಅವರು ಹೇಳುತ್ತಿದ್ದರು ಎಂದು ವಿಶ್ಲೇಷಿಸಿದರು.

ಪ್ರಾಂಶುಪಾಲ ನಂಜುಂಡಸ್ವಾಮಿ, ಬೋಧಕರಾದ ಭಾರತಿ, ಶ್ರೀಧರರಾಜ ಅರಸ್, ಎನ್.ಮಹೇಶ್ ಭಾಗವಹಿಸಿದ್ದರು.

ಅರಮನೆಯಲ್ಲಿ ಸಂಭ್ರಮ: ಮೈಸೂರು ಅರಮನೆ ಆವರಣದಲ್ಲಿ ಚಾಮರಾಜ ಒಡೆಯರ್‌ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಜಯಂತಿಯನ್ನು ಆಚರಿಸಲಾಯಿತು.

ಮೈಸೂರು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಮಾತನಾಡಿ, ‘ಮೈಸೂರಿನ ರಾಜರ ಪೈಕಿ ಚಾಮರಾಜ ಒಡೆಯರ್ ಅವರದು ವಿಶೇಷ ಪಾತ್ರ. ನವರಾತ್ರಿಗೆ ರಂಗು ತುಂಬಿ, ಅದನ್ನು ನಾಡಿನಾಚಗೂ ತೆಗೆದುಕೊಂಡು ಹೋದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.

ಶಿಕ್ಷಣ ತಜ್ಞ ವೀರಯ್ಯ ಮೈಸೂರು ಅವರು ಜಯಚಾಮರಾಜೇಂದ್ರ ಒಡೆಯರ್ ಕುರಿತು ಉಪನ್ಯಾಸ ನೀಡಿದರು.  ಚುಟುಕು ಸಾಹಿತ್ಯ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಎಂ.ಜಿ.ಆರ್.ಅರಸ್, ಒಕ್ಕಲಿಗರ ವಿಕಾಶ ವೇದಿಕೆ ಅಧ್ಯಕ್ಷೆ ಯಮುನಾ, ನಾಲ್ವಡಿ ಕೃಷ್ಣರಾಜ ಒಡೆಯರ್ ಪುನರ್ ಪ್ರತಿಷ್ಠಾಪನಾ ಸಮಿತಿ ಸಮಿತಿ ಅಧ್ಯಕ್ಷ ಸೋಸಲೆ ಸಿದ್ದರಾಜು, ವಂಗೀಪುರದ ನಂಬಿಮಠದ ಇಳೈ ಆಳ್ವಾರ್ ಸ್ವಾಮೀಜಿ, ಅರಮನೆ ಉಳಿಸಿ ಹೋರಾಟ ಸಮಿತಿಯ ಎಂ.ರಾಮೇಗೌಡ, ನಾಗಪ್ರಸನ್ನ ರಾಜೇ ಅರಸ್, ನಗರಪಾಲಿಕೆ ಮಾಜಿ ಸದಸ್ಯ ರಘುರಾಜೇ ಅರಸ್, ಅರಸು ಪ್ರತಿಭಾ ಬಳಗ ಅಧ್ಯಕ್ಷ ಎಂ.ಮಲ್ಲರಾಜೇ ಅರಸ್ ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು