ಸೋಮವಾರ, ಅಕ್ಟೋಬರ್ 21, 2019
24 °C

ಅರಮನೆ ಆವರಣದಲ್ಲಿ ಗಜಪಡೆ ತಾಲೀಮು

Published:
Updated:
Prajavani

ಮೈಸೂರು: ಜಂಬೂಸವಾರಿ ಮೆರವಣಿಗೆಗೆ ಪೂರ್ವಭಾವಿಯಾಗಿ ಅರಮನೆ ಆವರಣದಲ್ಲಿ ಶನಿವಾರ ಪುಷ್ಪಾರ್ಚನೆಯ ಮೊದಲ ಹಂತದ ತಾಲೀಮು ನಡೆಸಲಾಯಿತು.

ಪೊಲೀಸರು ಪಥ ಸಂಚಲನದಲ್ಲಿ ಪಾಲ್ಗೊಂಡರು. ಅಂಬಾರಿ‌ ಕಟ್ಟುವ ಜಾಗದಿಂದ ಗಾಂಭೀರ್ಯವಾಗಿ ಹೆಜ್ಜೆ ಇಟ್ಟು ಬಂದ ಅರ್ಜುನ ಆನೆಗೆ ಮೇಯರ್‌ ಪುಷ್ಪಲತಾ ಜಗನ್ನಾಥ್‌, ಡಿಸಿಪಿ ಮುತ್ತುರಾಜ್‌ ಹಾಗೂ ಅರಣ್ಯ ಅಧಿಕಾರಿಗಳು ಪುಷ್ಪಾರ್ಚನೆ ನೆರವೇರಿಸಿದರು. ಬಳಿಕ ಗೌರವ ವಂದನೆ ಸಲ್ಲಿಸಿದರು.

‘ಆನೆಗಳು ಶಾಂತಚಿತ್ತವಾಗಿ ತಾಲೀಮಿನಲ್ಲಿ ಭಾಗವಹಿಸಿವೆ. ಅರ್ಜುನ ಕೂಡ ಗಾಂಭೀರ್ಯದಿಂದ ತನ್ನ ಕರ್ತವ್ಯ ನಿಭಾಯಿಸುತ್ತಿದ್ದಾನೆ’ ಎಂದು ಡಿಸಿಎಫ್‌ ಅಲೆಕ್ಸಾಂಡರ್‌ ತಿಳಿಸಿದರು.

Post Comments (+)