ಗುಣಾತ್ಮಕ ಸಿನಿಮಾಗಳ ನಿರ್ಮಾಣವಾಗಲಿ

7

ಗುಣಾತ್ಮಕ ಸಿನಿಮಾಗಳ ನಿರ್ಮಾಣವಾಗಲಿ

Published:
Updated:

ಮೈಸೂರು: ಗುಣಾತ್ಮಕ ಗುಣದ ಕೊರತೆಯಿಂದಾಗಿ ಈಚಿನ ಚಲನಚಿತ್ರಗಳು ಪ್ರೇಕ್ಷಕರ ಮನಗೆಲ್ಲಲು ವಿಫಲವಾಗುತ್ತಿವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎಂ.ಆರ್‌.ರವಿ ವಿಷಾದ ವ್ಯಕ್ತಪಡಿಸಿದರು.

ಗ್ರಹೇಶ್ವರ ವಿದ್ಯಾರಣ್ಯಂ ಅವರ ಸಾಹಿತ್ಯ ಹಾಗೂ ಸಂಗೀತ ನಿರ್ದೇಶನದ ‘ಶ್ರೀಗರಿ’ ಚಿತ್ರದ ಸಿಡಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.  ಚಲನಚಿತ್ರದ ಮೂಲ ಆಶಯವೇ ಸಮಾಜವನ್ನು ತಿದ್ದುವುದು. ಆದರೆ, ಸಿನಿಮಾಗಳು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗುತ್ತಿವೆ. ಹಾಗಾಗಿ ಹೊಸ ಪ್ರತಿಭೆಗಳು ಕ್ಷೇತ್ರ ಪ್ರವೇಶ ಮಾಡುವಾಗಲೇ ಬದ್ಧತೆಯ ಸಂಕಲ್ಪ ಮಾಡಬೇಕು. ಜನಪರ, ಸಮಾಜಪರ ಧೋರಣೆಗಳನ್ನು ಹೊಂದಿ, ಅವನ್ನು ಉಳಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕಾಂಗ್ರೆಸ್ ಮುಖಂಡೆ ಮಂಜುಳಾ ಮಾನಸ ಅತಿಥಿಯಾಗಿ ಮಾತನಾಡಿ, ಕರ್ನಾಟಕದಲ್ಲಿ ಕನ್ನಡ ಚಿತ್ರಗಳಿಗೇ ಮೊದಲ ಆದ್ಯತೆ ಇರಬೇಕು. ‍‍‍ಪರಭಾಷಾ ಚಿತ್ರಗಳಿಗೆ ನಂತರದ ಮಾನ್ಯತೆ ಕೊಡಬೇಕು. ಬೇರೆ ರಾಜ್ಯಗಳಲ್ಲಿ ಕನ್ನಡದ ಚಿತ್ರಗಳು ತೆರೆಕಾಣುತ್ತಿಲ್ಲ. ಈ ನಿಟ್ಟಿನಲ್ಲಿ ನಮ್ಮ ಕಲಾವಿದರು ಗಮನಹರಿಸಬೇಕು ಎಂದು ಹೇಳಿದರು.

ಸಿನಿಮಾದ ಹಾಡುಗಳನ್ನು ಯುಟ್ಯೂಬ್‌ಗೆ ಅಪ್ಲೋಡ್ ಮಾಡಲಾಯಿತು. ‘ಶ್ರೀಗರಿ’ ಸಿನಿಮಾ ನಿರ್ದೇಶಕ ಗ್ರಹೇಶ್ವರ್ ವಿದ್ಯಾರಣ್ಯಂ, ಕರ್ನಾಟಕ ಕಾವಲು ಪಡೆ ರಾಜ್ಯಾಧ್ಯಕ್ಷ ಎಂ.ಮೋಹನಕುಮಾರ್ ಗೌಡ, ಸಾಂಸ್ಕೃತಿಕ ಘಟಕದ ಅಧ್ಯಕ್ಷ ಮತ್ತು ಸಾಹಿತಿ ಟಿ.ಸತೀಶ್ ಜವರೇಗೌಡ, ಸಂಘಟನಾ ಕಾರ್ಯದರ್ಶಿ ಎಸ್.ದಿವಾಕರ್ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !