ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ವಿಜ್ಞಾನಿಗಳಿಂದ ಭತ್ತ ಪರಿಶೀಲನೆ

ಕಳಪೆ ಬಿತ್ತನೆ ಬೀಜ ಮಾರಾಟ ಆರೋಪ: ಹಿರಿಯೂರು ಗ್ರಾಮಕ್ಕೆ ಭೇಟಿ
Last Updated 16 ಅಕ್ಟೋಬರ್ 2020, 4:26 IST
ಅಕ್ಷರ ಗಾತ್ರ

ತಿ.ನರಸೀಪುರ: ಕಳಪೆ ಭತ್ತ ಬಿತ್ತನೆ ಬೀಜ ಮಾರಾಟ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ತಾಲ್ಲೂಕಿನ ಹಿರಿಯೂರು ಗ್ರಾಮದ ಜಮೀನುಗಳಿಗೆ ಮಂಡ್ಯ ವಿ.ಸಿ ಫಾರಂನ ಕೃಷಿ ವಿಜ್ಞಾನಿಗಳು ಹಾಗೂ ತಾಲ್ಲೂಕು ಅಧಿಕಾರಿಗಳು ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.

ಪಟ್ಟಣದ ಕಾಲೇಜು ರಸ್ತೆಯ ಅಂಗಡಿಯೊಂದರಲ್ಲಿ ಗ್ರಾಮದ ಕೆಲ ರೈತರು ‘ಜಯಶ್ರೀ’ ಎಂಬ ಭತ್ತದ ತಳಿ ಖರೀದಿಸಿ ನಾಟಿ ಮಾಡಿದ್ದರು. ಆದರೆ ನಿಗದಿತ ಅವಧಿಗೂ ಮುನ್ನವೇ ಭತ್ತದ ತೆನೆ ಒಡೆದಿದೆ. ಇದರಿಂದ ಇಳುವರಿ ಕಡಿಮೆಯಾಗುತ್ತದೆ ಎಂದು ಆರೋಪಿಸಿ ರೈತರು ಅಂಗಡಿ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ರೈತರು ಕೃಷಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರಿಂದ ಗುರುವಾರ ಕೃಷಿ ವಿಜ್ಞಾನಿಗಳಾದ ಡಾ. ಶಿವಕುಮಾರ್, ದಿನೇಶ್, ಉಪನಿರ್ದೇಶಕ ಸೋಮಶೇಖರ್, ತಜ್ಞರಾದ ಪುಷ್ಪಲತಾ, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಜಯರಾಮಯ್ಯ ಭೇಟಿ ನೀಡಿ ಭತ್ತದ ಬೆಳೆಯನ್ನು ಪರಿಶೀಲಿಸಿದರು.

‘ಇದು ಅಲ್ಪಾವಧಿ ತಳಿ ಆಗಿರುವುದರಿಂದ ಬೇಗ ತೆನೆ ಬಂದಿದೆ. ಈ ಬಗ್ಗೆ ಶೀಘ್ರ ವರದಿ ನೀಡಲಾಗುವುದು’ ಎಂದು ಹೇಳಿದ ವಿಜ್ಞಾನಿಗಳು, ರೈತರಿಗೆ ಅಗತ್ಯ ಸಲಹೆ, ಸೂಚನೆ ನೀಡಿದ್ದಾರೆ.

ತಾಂತ್ರಿಕ ಅಧಿಕಾರಿ ರಾಘವೇಂದ್ರ, ಮೂಗೂರು ಕೃಷಿ ಕೇಂದ್ರದ ಪ್ರಭಾರ ಅಧಿಕಾರಿ ವಿಜಯಲಕ್ಷ್ಮೀ, ರೈತರಾದ ಸೋಮಣ್ಣ, ಕುಮಾರ್, ನವೀನ್ ಸೇರಿದಂತೆ ಮತ್ತಿತರರು
ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT