ಕೇಂದ್ರದ ನೆರವಿಗೆ ಸಿದ್ದರಾಮಯ್ಯ ಆಗ್ರಹ

7

ಕೇಂದ್ರದ ನೆರವಿಗೆ ಸಿದ್ದರಾಮಯ್ಯ ಆಗ್ರಹ

Published:
Updated:

ಮೈಸೂರು: ಕೊಡಗು ಜಿಲ್ಲೆಯ ಜನರು ಮಳೆ ಹಾಗೂ ಪ್ರವಾಹದಿಂದ ತತ್ತರಿಸಿದ್ದು, ಕೇಂದ್ರ ಸರ್ಕಾರ ಕೂಡಲೇ ನೆರವಿಗೆ ಧಾವಿಸಬೇಕು ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಇಲ್ಲಿ ಶನಿವಾರ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಕೇರಳದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಪರಿಹಾರ ಘೋಷಿಸಿದ್ದಾರೆ. ಕೊಡಗಿನಲ್ಲೂ ಸಾಕಷ್ಟು ಸಾವು–ನೋವು, ನಷ್ಟ ಉಂಟಾಗಿದ್ದು, ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು.

‘ಕಳೆದ 60 ವರ್ಷಗಳಲ್ಲಿ ಇಂತಹ ಮಳೆಯನ್ನು ನಾನು ನೋಡಿಯೇ ಇಲ್ಲ. ಕೊಡಗಿನಲ್ಲಿ ಸಂಕಷ್ಟದಲ್ಲಿರುವವರ ನೆರವಿಗೆ ಎಲ್ಲರೂ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !