ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ನಿ ಹಂತಕನಿಗೆ ಜೀವಾವಧಿ ಶಿಕ್ಷೆ

ಪ್ರತ್ಯೇಕ ಪ್ರಕರಣ; ಇಬ್ಬರು ಆತ್ಮಹತ್ಯೆ
Last Updated 12 ಜುಲೈ 2019, 9:24 IST
ಅಕ್ಷರ ಗಾತ್ರ

ಮೈಸೂರು: ಮಕ್ಕಳಾಗದ್ದಕ್ಕೆ ಬೇರೆ ಮದುವೆಯಾಗಲು ಅಡ್ಡಿಯಾಗುತ್ತಾರೆ ಎಂದು ಪತ್ನಿ ಭಾಗ್ಯಾ ಅವರನ್ನು ಕೊಲೆ ಮಾಡಿದ್ದ ಪತಿ ಬೆಟ್ಟದಪುರದ ನಿವಾಸಿ ಮಹದೇವ ಎಂಬಾತನಿಗೆ ಇಲ್ಲಿನ 5ನೇ ಹೆಚ್ಚುವರಿ ಮತ್ತು ಸೆಷೆನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ₹ 50 ಸಾವಿರ ದಂಡ ವಿಧಿಸಿದೆ.

ಮೊದಲಿನಿಂದಲೂ ಪತ್ನಿಗೆ ಮಕ್ಕಳಾಗಲಿಲ್ಲ ಎಂದು ಈತ ಹೊಡೆಯುತ್ತಿದ್ದ. 2016ರ ಜನವರಿ 1ರಂದು ರಾತ್ರಿ ಮಲಗುವಾಗ ವಿಷದ ಪುಡಿ ಬೆರೆಸಿ ನೀರು ಕುಡಿಸಿದ. ಮಲಗಿದ ನಂತರ ಪತ್ನಿಯ ತಲೆಯ ಅರ್ಧದಷ್ಟು ಭಾಗ ಕತ್ತರಿಸಿ ಶವವನ್ನು ಮನೆಯ ಹಿಂಭಾಗದ ಉಣ್ಣೆಗುತ್ತಿಯಲ್ಲಿ ಇರಿಸಿದ್ದ. ಈತನನ್ನು ಇನ್‌ಸ್ಪೆಕ್ಟರ್ ಪ್ರಸನ್ನಕುಮಾರ್ ಬಂಧಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಜಿ.ಜಿ.ಕುರುವಟ್ಟಿ ಅವರು ಶಿಕ್ಷಿ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ನಾಗಪ್ಪ ಸಿ.ನಾಕ್‍ಮನ್ ವಾದ ಮಂಡಿಸಿದ್ದರು.

ಪ್ರತ್ಯೇಕ ಪ್ರಕರಣ; ಇಬ್ಬರು ಆತ್ಮಹತ್ಯೆ

ಮೈಸೂರು: ನಂಜನಗೂಡು ತಾಲ್ಲೂಕಿನ ಹಲ್ಲರೇ ಗ್ರಾಮದ ಮಣಿಕಂಠ (18) ಎಂಬುವವರು ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇವರು ಕಲ್ಯಾಣ ಮಂಟಪಗಳಲ್ಲಿ ಅಡುಗೆ ಬಡಿಸುವ ಕೆಲಸ ಮಾಡುತ್ತಿದ್ದರು. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಗೌರಿಶಂಕರನಗರ ನಿವಾಸಿ ಶಂಕರ್ (32) ಎಂಬುವವರು ತಮ್ಮ ನಿವಾಸದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇವರು ಖಾಸಗಿ ಆಸ್ಪತ್ರೆಯಲ್ಲಿ ಶೂಶ್ರೂಷಕರಾಗಿದ್ದರು. ಹಣಕಾಸು ಮುಗ್ಗಟ್ಟಿನಿಂದ ಬಳಲುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಎಸಿಬಿ ಬಲೆಗೆ ಕೆಎಸ್‌ಆರ್‌ಟಿಸಿ ನೌಕರ

ಮೈಸೂರು: ಕೆಎಸ್‌ಆರ್‌ಟಿಸಿಯ ಬಸ್‌ ಡಿಪೊದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಂಜುನಾಥ್ ಎಂಬ ನೌಕರ ₹ 10 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಚಾಲಕರೊಬ್ಬರಿಗೆ ₹ 1.03 ಲಕ್ಷ ಬಾಕಿ ಹಣದ ಚೆಕ್‌ ನೀಡಲು ಇವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಚಾಲಕ ಎಸಿಬಿಗೆ ದೂರು ನೀಡಿದ್ದರು. ಪೊಲೀಸರ ಸಲಹೆಯಂತೆ ಲಂಚ ನೀಡಲು ತೆರಳಿದಾಗ ಮಂಜುನಾಥ್ ಅವರನ್ನು ಹಿಡಿದು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT