ಮಂಗಳವಾರ, ಆಗಸ್ಟ್ 20, 2019
21 °C

ಸಂಪತ್ ಕುಮಾರ್‌ಗೆ ‘ಸಂಸ್ಕೃತ ಸೇವಾವೃತ್ತಿ ಸಮ್ಮಾನ್’

Published:
Updated:
Prajavani

ಮೈಸೂರು: ನಗರದ ‘ಸುಧರ್ಮ‘ ಸಂಸ್ಕೃತ ದಿನಪತ್ರಿಕೆಯ ಸಂಪಾದಕ ಕೆ.ವಿ.ಸಂಪತ್ ಕುಮಾರ್ ಅವರಿಗೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ವತಿಯಿಂದ ನೀಡುವ, 2019ನೇ ಸಾಲಿನ ‘ವಿಶಿಷ್ಟ ಸಂಸ್ಕೃತ ಸೇವಾವೃತ್ತಿ ಸಮ್ಮಾನ್’ ಲಭಿಸಿದೆ.

ಪ್ರಶಸ್ತಿಯು ₹ 1 ಲಕ್ಷ ನಗದು ಹಾಗೂ ಪ್ರಮಾಣಪತ್ರ ಒಳಗೊಂಡಿದೆ ಎಂದು ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ಕುಲಸಚಿವ ಪ್ರೊ.ಎಸ್. ಸುಬ್ರಮಣ್ಯ ಶರ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post Comments (+)