ಬುಧವಾರ, ಆಗಸ್ಟ್ 4, 2021
26 °C

ಅಂಗಡಿ ಬಾಗಿಲು ಮೀಟಿ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಇಲ್ಲಿನ ವಿದ್ಯಾರಣ್ಯಪುರಂ 4ನೇ ಮೇನ್‌ನ ಸಿವೇಜ್‌ಫಾರಂ ರಸ್ತೆಯಲ್ಲಿರುವ ಬಿ.ಕೆ.ಗಣೇಶ್ ಎಂಬುವವರಿಗೆ ಸೇರಿದ ಮಾರುತಿ ಪ್ರಾವಿಷನ್‌ ಸ್ಟೋರ್‌ ಬಾಗಿಲನ್ನು ಬುಧವಾರ ರಾತ್ರಿ ಮೀಟಿರುವ ಕಳ್ಳರು ₹ 10 ಸಾವಿರ ನಗದನ್ನು ಕಳ್ಳತನ ಮಾಡಿದ್ದಾರೆ.

ಅಂಗಡಿಯ ರೋಲಿಂಗ್‌ ಶಟರ್ ಮೀಟಿ ಕಳ್ಳರು ಒಳನುಗ್ಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾರಣ್ಯಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2 ದ್ವಿಚಕ್ರ ವಾಹನ ಕಳವು

ಮೈಸೂರಿನ ದೇವರಾಜ ಅರಸು ರಸ್ತೆ ಹಾಗೂ ಸಯ್ಯಾಜಿರಾವ್‌ ರಸ್ತೆಯಲ್ಲಿ ಎರಡು ದ್ವಿಚಕ್ರ ವಾಹನಗಳನ್ನು ಕಳವು ಮಾಡಲಾಗಿದೆ.‌

ಸುನಿಲ್‌ಕುಮಾರ್ ಎಂಬುವವರು ದೇವರಾಜ ಅರಸು ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟರ್‌ ಹಾಗೂ ತಿಮ್ಮಯ್ಯ ಎಂಬುವವರು ಸಯ್ಯಾಜಿರಾವ್‌ ರಸ್ತೆಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವಾಗಿದೆ. ಪ್ರಕರಣ ದೇವರಾಜ ಠಾಣೆಯಲ್ಲಿ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.