ಹುಲಿ, ಚಿರತೆ ಸಾವು: ಸಿಗದ ಸುಳಿವು

7

ಹುಲಿ, ಚಿರತೆ ಸಾವು: ಸಿಗದ ಸುಳಿವು

Published:
Updated:

ಮೈಸೂರು/ಎಚ್.ಡಿ.ಕೋಟೆ: ವನ್ಯಜೀವಿಗಳ ಮೃತದೇಹಗಳು ಕಬಿನಿ ಹಿನ್ನೀರಿನಲ್ಲಿ ಪತ್ತೆಯಾಗುತ್ತಿದ್ದರೂ ತನಿಖೆ ಮಾತ್ರ ಚುರುಕುಗೊಂಡಿಲ್ಲ.

ಆ.1ರಂದು ಹುಲಿಯ ಮೃತದೇಹ ಹಿನ್ನೀರಿನಲ್ಲಿ ಪತ್ತೆಯಾಗಿತ್ತು. ತಂತಿಬೇಲಿ ದಾಟುವಾಗ ವಿದ್ಯುತ್ ಪ್ರವಹಿಸಿ ಮೃತಪಟ್ಟಿದೆ ಎಂಬುದು ಗೊತ್ತಾಗಿತ್ತು. ಆದರೆ, ಇದರ ಉಗುರುಗಳನ್ನು ಕತ್ತರಿಸಿ ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿದವರು ಯಾರು ಎಂಬುದು ಇನ್ನೂ ಪತ್ತೆಯಾಗಿಲ್ಲ. ಈ ಕುರಿತ ತನಿಖೆಗೆ ಎರಡು ತಂಡಗಳನ್ನು ರಚಿಸಲಾಗಿದ್ದರೂ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡು ಬಂದಿಲ್ಲ.

ಈ ಘಟನೆ ನಡೆದ ಮೂರೇ ದಿನಕ್ಕೆ ಚಿರತೆಯೊಂದರ ಮೃತದೇಹ ಕಬಿನಿ ಜಲಾಶಯದ ನೀರಿನಲ್ಲಿ ಪತ್ತೆಯಾಗಿದೆ. ಇದರ ದೇಹ ಸಂಪೂರ್ಣ ಕೊಳೆತು ಹೋಗಿದ್ದು, ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ.

ಈ ಭಾಗದಲ್ಲಿ ವನ್ಯಜೀವಿಗಳ ಉಪಟಳ ಹೆಚ್ಚು. ಅದರಲ್ಲೂ ಕಾಡುಹಂದಿಗಳ ಕಾಟದಿಂದ ಅಪಾರ ಬೆಳೆ ನಷ್ಟವಾಗುತ್ತದೆ. ಇದರ ತಡೆಗೆ ರೈತರು ತಂತಿಬೇಲಿಗೆ ವಿದ್ಯುತ್ ಸಂಪರ್ಕ ನೀಡುತ್ತಾರೆ. ಇವುಗಳಿಗೆ ಸಿಲುಕಿ ಮೃತಪಟ್ಟ ಪ್ರಾಣಿಗಳನ್ನು ಕಬಿನಿ ಹಿನ್ನೀರಿಗೆ ಎಸೆಯಲಾಗುತ್ತದೆ. ಇಂತಹ ಪ್ರಕರಣಗಳನ್ನು ತಡೆಯಲು ಅರಣ್ಯ ಇಲಾಖೆಯಾಗಲಿ, ಜಿಲ್ಲಾಡಳಿತವಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ ಸ್ಥಳೀಯರು ದೂರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !