ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್‌ ಅಂತ್ಯದೊಳಗೆ 500 ಸ್ಮಾರಕ ಗುರುತಿಸಲು ಸೂಚನೆ: ಎಚ್.ಕೆ.ಪಾಟೀಲ

Published 27 ಜನವರಿ 2024, 23:42 IST
Last Updated 27 ಜನವರಿ 2024, 23:42 IST
ಅಕ್ಷರ ಗಾತ್ರ

ಮೈಸೂರು: ‘ರಾಜ್ಯದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸ್ಮಾರಕಗಳನ್ನು ಗುರುತಿಸುವ ಕಾರ್ಯ ಭರದಿಂದ ನಡೆದಿದ್ದು, ಮಾರ್ಚ್‌ ಅಂತ್ಯದೊಳಗೆ 500 ಸ್ಮಾರಕಗಳನ್ನು ಗುರುತಿಸುವಂತೆ ಪರಂಪರೆ ಇಲಾಖೆ ಆಯುಕ್ತರಿಗೆ ಸೂಚಿಸಲಾಗಿದೆ’ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.

ನಗರದಲ್ಲಿ ಶನಿವಾರ ವಿಠಲರೆಡ್ಡಿ ಎಫ್‌. ಚುಳಕಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ರಾಜ್ಯದಲ್ಲಿರುವ 25 ಸಾವಿರ ಸ್ಮಾರಕಗಳಲ್ಲಿ 10 ಸಾವಿರ ಗುಡಿ‌ರೂಪದಲ್ಲಿವೆ. 850 ಸ್ಮಾರಕಗಳನ್ನು ಗುರುತಿಸಲಾಗಿದ್ದು, 550 ಸ್ಮಾರಕಗಳನ್ನು ರಕ್ಷಿಸಲಾಗಿದೆ. ಇನ್ನೂ 24 ಸ್ಮಾರಕಗಳನ್ನು ರಾಜ್ಯ ಸರ್ಕಾರ ಗುರುತಿಸಿ ಸಂರಕ್ಷಿಸಬೇಕಾಗಿದೆ’ ಎಂದರು.

‘ಐಹೊಳೆಯೊಂದರಲ್ಲೇ 125 ಗುಡಿಗಳಿವೆ. ಅವು ಹಂಪಿಯಲ್ಲಿರುವ ಸ್ಮಾರಕಗಳಿಗಿಂತಲೂ ಕಡಿಮೆ ಏನಿಲ್ಲ. 50ರಷ್ಟನ್ನು ಭಾರತೀಯ ಸರ್ವೇಕ್ಷಣಾ ಇಲಾಖೆ ಗುರುತಿಸಿ ಸಂರಕ್ಷಿಸಿದೆ. ಉಳಿದ ಸ್ಮಾರಕಗಳು ಮನೆಗಳಲ್ಲಿವೆ. ‌ಕೆಲವು ಸ್ಮಾರಕಗಳಲ್ಲಿ ಎಮ್ಮೆ ಕಟ್ಟಿದ್ದಾರೆ. ಸ್ಮಾರಕಗಳನ್ನು ನೋಡಿದರೆ ಹೊಟ್ಟೆ ಉರಿಯುತ್ತದೆ’ ಎಂದು ವಿಷಾದಿಸಿದರು.

‘ಕನ್ನಡದ ಮೊದಲ ವಿಶ್ವವಿದ್ಯಾಲಯ ಚಿತ್ತಾಪುರದಲ್ಲಿನ ನಾಗಾವಿ ವಿಶ್ವವಿದ್ಯಾಲಯ. ಅದನ್ನು ಸಂರಕ್ಷಿಸುವ ಕೆಲಸವೂ ನಡೆಯಬೇಕು’ ಎಂದರು.

’ತಾತಗುಣಿಯ ರೋರಿಚ್‌ ಎಸ್ಟೇಟ್‌ ಅನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಬೇಕು’ ಎಂದು ಇದೇ ಸಂದರ್ಭದಲ್ಲಿ ಕಲಾವಿದ ಎಂ.ಎಸ್‌.ಮೂರ್ತಿ ಸಚಿವರ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT