ಹುಣಸೂರು (ಮೈಸೂರು ಜಿಲ್ಲೆ): ವಿಶ್ವ ಹಿಂದೂ ಪರಿಷತ್‌ನ 60ನೇ ವರ್ಷಾಚರಣೆ ಪ್ರಯುಕ್ತ ತಾಲ್ಲೂಕಿನ ಗದ್ದಿಗೆ ಕ್ಷೇತ್ರದಲ್ಲಿ ಗುರುವಾರ ಆಯೋಜಿಸಿದ್ದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಆದಿವಾಸಿ ಗಿರಿಜನ ಸಮುದಾಯದ 60 ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿರಿಸಿದವು.
ಹುಣಸೂರು ಉಪವಿಭಾಗದ 18 ಹಾಡಿಗಳಿಂದ 60 ವಧು–ವರರ ಜೋಡಿ ನೋಂದಣಿ ಮಾಡಿಕೊಂಡಿದ್ದು, ಅವರಿಗೆ ಪರಿಷತ್‌ನಿಂದ ತಾಳಿ, ಎರಡು ಜೊತೆ ಬಟ್ಟೆ ಮತ್ತು ₹15 ಸಾವಿರ ಮೌಲ್ಯದ ಪರಿಕರಗಳನ್ನು ನೀಡಲಾಯಿತು.
ಬಜರಂಗದಳದ ರಾಷ್ಟ್ರೀಯ ಸಂಯೋಜಕ ಸೂರ್ಯ ನಾರಾಯಣ್ ಮಾತನಾಡಿ, ‘ಅನ್ಯ ಧರ್ಮೀಯರ ಮಾತಿಗೆ ಮರುಳಾಗಿ ಹಿಂದೂಗಳು ಮತಾಂತರವಾಗುತ್ತಿದ್ದಾರೆ. ಅದನ್ನು ನಿಯಂತ್ರಿಸಲೆಂದೇ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ’ ಎಂದರು.
ಉಕ್ಕಿನಕಂತೆ ಮಠದ ಸಾಂಬಸದಾಶಿವ ಸ್ವಾಮೀಜಿ, ಗವಿಸಿದ್ಧೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. 12 ಪುರೋಹಿತರು ನೇತೃತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.