ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲೂನ್‌ ಮೇಲೆ ದಾಳಿ: ಐವರು ಯುವತಿಯರ ರಕ್ಷಣೆ

Published 1 ನವೆಂಬರ್ 2023, 2:45 IST
Last Updated 1 ನವೆಂಬರ್ 2023, 2:45 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಆಲನಹಳ್ಳಿಯ ಮನೆಯ ಮೊದಲ ಮಹಡಿಯಲ್ಲಿ ಸಲೂನ್‌ ಮೇಲೆ ಮಂಗಳವಾರ ಸಂಜೆ ದಾಳಿ ನಡೆಸಿದ ವಿಶೇಷ ಪೊಲೀಸರ ತಂಡವು, ಐವರು ಯುವತಿಯರನ್ನು ರಕ್ಷಿಸಿದೆ.

‘ದನಿಯಾ ಫ್ಯಾಮಿಲಿ ಸಲೂನ್‌’ನಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ’ ಎಂದು ಒಡನಾಡಿ ಸೇವಾ ಸಂಸ್ಥೆಯವರು ನೀಡಿದ ಮಾಹಿತಿ ಆಧರಿಸಿ ಈ ದಾಳಿ ನಡೆದಿದೆ. ಸಲೂನ್‌ನಲ್ಲಿ ಇಬ್ಬರು ಯುವಕರು ಹಾಗೂ ಐವರು ಯುವತಿಯರು ಇದ್ದರು ಎಂದು ತಿಳಿದುಬಂದಿದೆ.

‘ಮನೆಯು ನಿವೃತ್ತ ಪೊಲೀಸ್‌ ಅಧಿಕಾರಿಗೆ ಸೇರಿದ್ದು, ಮಹಡಿಯನ್ನು ಬಾಡಿಗೆಗೆ ಪಡೆದಿದ್ದ ಮಹೇಶ್ ಎನ್ನುವವರು ಸಲೂನ್‌ ನಡೆಸುತ್ತಿದ್ದು 8 ತಿಂಗಳಿನಿಂದ ಅನೈತಿಕ ಚಟುವಟಿಕೆ ನಡೆಸುತ್ತಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದರು’ ಎಂದು ಒಡನಾಡಿ ಸಂಸ್ಥೆಯ ಪರಶುರಾಮ್‌ ತಿಳಿಸಿದರು.

‘ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ್ದೇವೆ. ತನಿಖೆ ಮುಂದುವರಿದಿದೆ’ ಎಂದು ನಗರ ಪೊಲೀಸ್‌ ಆಯುಕ್ತ ರಮೇಶ್ ಬಾನೋತ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT