ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜದ ಕಣ್ತೆರೆಸುವ ಮಾರ್ಗದರ್ಶಿ ಸಾಹಿತ್ಯ: ಮಡ್ಡೀಕೆರೆ ಗೋಪಾಲ್

Published 21 ಏಪ್ರಿಲ್ 2024, 15:59 IST
Last Updated 21 ಏಪ್ರಿಲ್ 2024, 15:59 IST
ಅಕ್ಷರ ಗಾತ್ರ

ಮೈಸೂರು: ‘ನಾಡು ನುಡಿಯ ಬೆಳವಣಿಗೆಯಲ್ಲಿ ಸಾಹಿತ್ಯ ಮಹತ್ವದ ಪಾತ್ರವನ್ನು ವಹಿಸುತ್ತದೆ. ಸಾಹಿತ್ಯ ಓದುವ ಸಂಸ್ಕೃತಿ ವೃದ್ಧಿಸಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಹೇಳಿದರು.

ನಗರದ ನಮನ ಕಲಾ ಮಂಟಪದಲ್ಲಿ ಹೊಯ್ಸಳ ಕನ್ನಡ ಸಂಘ, ಸವಿಗನ್ನಡ ಪತ್ರಿಕಾ ಬಳಗ ಹಾಗೂ ಸ್ನೇಹ ಸಿಂಚನ ಟ್ರಸ್ಟ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಪ್ರೊ.ಗಜಾನನ ಈಶ್ವರ ಹೆಗಡೆ ಅವರ ಗೀತರೂಪಕ ಹಾಗೂ ಪ್ರೊ. ಪದ್ಮಿನಿ ಹೆಗಡೆ ಅವರ ಅರಿವಿನ ಕಡಲು ಸರ್ವಜ್ಞ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸಾಹಿತ್ಯದ ಕೃತಿಗಳು ಜನ ಮಾನಸಕ್ಕೆ ಅತೀ ಸಮೀಪದಲ್ಲಿದ್ದು ಸಮಾಜದ ಕಣ್ಣನ್ನು ತೆರೆಸುವ ನಿಟ್ಟಿನಲ್ಲಿ ಮಾರ್ಗದರ್ಶಿಗಳಂತೆ ರೂಪುಗೊಂಡಿವೆ’ ಎಂದು ತಿಳಿಸಿದರು.

ಕೃತಿಗಳನ್ನು ಹೊನ್ನಾವರದ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಸ್.ಎಚ್.ಗೌಡ ಹಾಗೂ ಕೋಶಾಧ್ಯಕ್ಷ ಎನ್.ಆರ್.ಹೆಗಡೆ ಅವರು ಬಿಡುಗಡೆಗೊಳಿಸಿದರು. ಜನಪದ ತಜ್ಞ ಆರ್.ಎನ್. ನಾಯಕ್ ಅವರು ಅರಿವಿನ ಕಡಲು ಸರ್ವಜ್ಞ ಕೃತಿ ಕುರಿತು, ಜೆಎಸ್ಎಸ್ ಮಹಾವಿದ್ಯಾಪೀಠದ ನಿರ್ದೇಶಕ ಮೊರಬದ ಮಲ್ಲಿಕಾರ್ಜುನ ಅವರು ಗೀತರೂಪಕ ಕೃತಿಯ ಕುರಿತು ಮಾತನಾಡಿದರು.

ಸಾಹಿತಿ ಶಾಂತಿ ನಾಯಕ್, ಹೊಯ್ಸಳ ಕನ್ನಡ ಸಂಘದ ಅಧ್ಯಕ್ಷ ರಂಗನಾಥ ಮೈಸೂರು ಹಾಗೂ ಸ್ನೇಹ ಸಿಂಚನ ಟ್ರಸ್ಟ್‌ನ ಅಧ್ಯಕ್ಷ ಮ.ನ.ಲತಾ ಮೋಹನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT