ಇಲ್ಲಿ ಕಾಂಗ್ರೆಸ್ ಜನಾಂದೋಲನದಲ್ಲಿ ಮಾತನಾಡಿದ ಅವರು, ‘ವಿಜಯೇಂದ್ರ ಹಲವು ಹಗರಣಗಳನ್ನು ಮಾಡಿದ್ದಾರೆ. ಅವರೇ ಮುಖ್ಯಮಂತ್ರಿಯಂತೆ ಕೆಲಸ ಮಾಡುತ್ತಿದ್ದರು. ಎಷ್ಟು ಕಡತಗಳಿಗೆ ಡೂಪ್ಲಿಕೇಟ್ ಸಹಿ ಮಾಡಿದ್ದಾರೆಂಬುದನ್ನು ರಾಜ್ಯ ಸರ್ಕಾರ ತನಿಖೆಗೊಳಪಡಿಸಬೇಕು. ಆಗ, ಯಡಿಯೂರಪ್ಪನವರ ಕಾಲದ ಮತ್ತಷ್ಟು ಹಗರಣಗಳು ಹೊರಬರುತ್ತವೆ’ ಎಂದು ಪ್ರತಿಪಾದಿಸಿದರು.