ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ‘ಹೈ ಲೈಫ್‌’ ಪ್ರದರ್ಶನ

Published 14 ಜೂನ್ 2024, 12:57 IST
Last Updated 14 ಜೂನ್ 2024, 12:57 IST
ಅಕ್ಷರ ಗಾತ್ರ

ಮೈಸೂರು: ‘ಹೈಲೈಫ್‌’ ಉಡುಪು ಹಾಗೂ ಗೃಹ ಅಲಂಕಾರಿಕ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಜೂನ್‌ 15, 16ರಂದು ಎಂ.ಜಿ.ರಸ್ತೆಯಲ್ಲಿರುವ ರ‍್ಯಾಡಿಸನ್‌ ಬ್ಲ್ಯೂ ಪ್ಲಾಜಾ ಹೋಟೆಲ್‌ನಲ್ಲಿ ನಡೆಯಲಿದೆ.

‘2021ರಲ್ಲಿ ಆರಂಭವಾದ ಪ್ರದರ್ಶನ ಮೇಳದ 10ನೇ ಆವೃತ್ತಿ ಇದಾಗಿದ್ದು, ದೇಶದ ಜನಪ್ರಿಯ ವಸ್ತ್ರವಿನ್ಯಾಸಕರು ವಿನ್ಯಾಸ ಮಾಡಿದ ಸಿದ್ಧ ಉಡುಪುಗಳು, ಮನಸೂರೆಗೊಳ್ಳುವ ಆಭರಣಗಳು, ಗೃಹೋಪಕರಣ, ಪೀಠೋಪಕರಣಗಳನ್ನೂ ಪ್ರದರ್ಶನಕ್ಕಿಡಲಾಗುತ್ತಿದೆ’ ಎಂದು ಆಯೋಜಕಿ ಶೋಮಿಕಾ ಶುಕ್ರವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಈ ಬಾರಿಯ ಪ್ರದರ್ಶನವನ್ನು ರೂ‍ಪದರ್ಶಿ ಹಾಗೂ ವಿನ್ಯಾಸಕಾರರಾದ ನಾಜಿಯಾ, ಸುಷ್ಮಾ ಉದ್ಘಾಟಿಸುವರು. ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ನಡೆಯುವ ಪ್ರದರ್ಶನದ ಪ್ರವೇಶ ಉಚಿತವಾಗಿದ್ದು, 50 ಮಳಿಗೆಗಳನ್ನು ತೆರೆಯಲಾಗಿದೆ. ನಾಲ್ಕು ವರ್ಷದ ಎಲ್ಲ ಪ್ರದರ್ಶನಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ₹100ರಿಂದ ವಸ್ತುಗಳ ಬೆಲೆ ಆರಂಭವಾಗಲಿದೆ’ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟಕ ಶ್ರೀಕಾಂತ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT