ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‍ಲೋಕಸಭಾ ಚುನಾವಣೆ| ಪಾಲ್ಗೊಳ್ಳುವುದು ಆದ್ಯ ಕರ್ತವ್ಯ-ಸಾಲುಂಡಿ ದೊರೆಸ್ವಾಮಿ

Published 1 ಏಪ್ರಿಲ್ 2024, 4:42 IST
Last Updated 1 ಏಪ್ರಿಲ್ 2024, 4:42 IST
ಅಕ್ಷರ ಗಾತ್ರ

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎನಿಸಿರುವ ನಮ್ಮ ದೇಶದಲ್ಲಿ ಜನತಂತ್ರದ ಹಬ್ಬವಾದ ಲೋಕಸಭಾ ಚುನಾವಣೆಯಲ್ಲಿ ಅರ್ಹ ಮತದಾರರೆಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಅದು ನಮ್ಮ ಆದ್ಯ ಕರ್ತವ್ಯವೂ ಹೌದು.

ಈ ಸಮಯದಲ್ಲಿ ಮತದಾರ ಅತ್ಯಂತ ಜಾಗರೂಕವಾಗಿ ಹಕ್ಕು ಚಲಾಯಿಸಬೇಕು. ಪ್ರತಿ ಮತವೂ ನಮ್ಮ ಮತ್ತು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ ಎಂಬುದನ್ನು ಎಲ್ಲರೂ ಮನಗಾಣಬೇಕು. ಯಾವುದೇ ಆಸೆ–ಆಮಿಷಕ್ಕೆ ಒಳಗಾಗದೇ ಸೂಕ್ತ ಎನಿಸುವವರಿಗೆ ಮತದಾನ ಮಾಡಬೇಕು. ಈ ಮೂಲಕ ಜವಾಬ್ದಾರಿಯನ್ನು ನಿರ್ವಹಿಸಬೇಕು. ಇತರರಿಗೂ ಪ್ರೇರಣೆ ನೀಡಬೇಕು.

ಇಂದಿನ ವ್ಯವಸ್ಥೆ ನೋಡಿ ಎಷ್ಟೋ ಮತದಾರರು ಭ್ರಮನಿರಸನಕ್ಕೆ ಒಳಗಾಗಿ ಮತದಾನದಿಂದ ದೂರ ಉಳಿಯಬಹುದು. ಈ ಮನಸ್ಥಿತಿ ಉಳ್ಳವರಿಗೆ ಮತದಾನದ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸಿ ಮತಗಟ್ಟೆಗೆ ಕರೆತರುವ ಕಾರ್ಯ ಜರೂರಾಗಿ ಆಗಬೇಕಾಗಿದೆ. ಎಲ್ಲರೂ ತಮ್ಮ ಹಕ್ಕು ಚಲಾಯಿಸಿದಾಗಲೇ ಪ್ರಜಾಪ್ರಭುತ್ವಕ್ಕೆ ಸೊಬಗು. ಈ ಅವಕಾಶವನ್ನು ಯಾರೂ ಕಳೆದುಕೊಳ್ಳಬಾರದು.

–ಸಾಲುಂಡಿ ದೊರೆಸ್ವಾಮಿ, ಉಪಾಧ್ಯಕ್ಷ, ಸರ್ಕಾರಿ ನೌಕರರ ಸಂಘ, ಮೈಸೂರು ಜಿಲ್ಲಾ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT