ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರಸ್ವಾಮಿಯ ಅದ್ಧೂರಿ ಉತ್ಸವ

ಪಟ್ಟಣದ ಪ್ರಮುಖ ಬೀದಿಯಲ್ಲಿ ಮುತ್ತಿನ ಪಲ್ಲಕ್ಕಿಯ ಮೆರವಣಿಗೆ
Published 11 ಡಿಸೆಂಬರ್ 2023, 13:10 IST
Last Updated 11 ಡಿಸೆಂಬರ್ 2023, 13:10 IST
ಅಕ್ಷರ ಗಾತ್ರ

ಕೆ.ಆರ್.ನಗರ: ಇಲ್ಲಿನ ಮಲೆ ಮಹದೇಶ್ವರಸ್ವಾಮಿ ದೇವಸ್ಥಾನ ಮತ್ತು ಉತ್ಸವ ಸಮಿತಿ ವತಿಯಿಂದ ಕೊನೆಯ ಕಾರ್ತಿಕ ಸೋಮವಾರದ ಅಂಗವಾಗಿ ಮಲೆ ಮಹದೇಶ್ವರಸ್ವಾಮಿಯ 53ನೇ ವಾರ್ಷಿಕೋತ್ಸವವು ವಿಜೃಂಭಣೆಯಿಂದ ನಡೆಯಿತು.

ಗಾವಡಗೆರೆ ಗುರುಲಿಂಗ ಜಂಗಮ ಮಠದ ನಟರಾಜ ಸ್ವಾಮೀಜಿ ಅವರು ಮಹದೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಬೆಳಿಗ್ಗೆ ಮಹದೇಶ್ವರಸ್ವಾಮಿ ಸತ್ತಿಗೆ ಮತ್ತು ನಂದಿ ಕಂಬಗಳಿಗೆ ಪೂಜೆ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಿದರು.

ಮಹದೇಶ್ವರಸ್ವಾಮಿ ಉತ್ಸವ ಮೂರ್ತಿಯನ್ನು ಮುತ್ತಿನ ಪಲ್ಲಕ್ಕಿಯಲ್ಲಿ ಇಟ್ಟು ಬಸವೇಶ್ವರ ಬ್ಲಾಕ್, ಮೈಸೂರು ರಸ್ತೆ, ಬಜಾರ್ ರಸ್ತೆ, 7ನೇ ರಸ್ತೆ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಉತ್ಸವ ಮೂರ್ತಿ ಭಕ್ತಾದಿಗಳ ಮನೆ ಬಳಿ ಬರುತ್ತಿದ್ದಂತೆ ಜನ ವಿಶೇಷ ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು.

ಇಡೀ ದಿನ ನಡೆದ ಮೆರವಣಿಗೆಯಲ್ಲಿ ಮಂಗಳವಾದ್ಯ, ನಂದಿ ಧ್ವಜ, ವೀರಭದ್ರ ಕುಣಿತ, ಮುತ್ತಿನ ಪಲ್ಲಕ್ಕಿ, ಕಂಸಾಳೆ, ನಾಸಿಕ್ ಡ್ರಮ್, ವೀರಗಾಸೆ, ಪೂಜಾ ಕುಣಿತ, ಚಂಡೆ ಮೇಳ, ಗೊಂಬೆ ಕುಣಿತ, ಯಕ್ಷಗಾನ, ಕೀಲು ಕುದುರೆ, ಬ್ಯಾಂಡ್ ಸೆಟ್, ವೀರಗಾಸೆ, ಪೂಜಾ ಕುಣಿತ, ನಾಸಿಕ್, ತಮಟೆ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆದವು.

ಯುವಕರ ತಂಡವು ತಮಟೆ ವಾದ್ಯಕ್ಕೆ ಇಡೀ ದಿನ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿತು. ಸಂಜೆ ಕರ್ಪೂರವಳ್ಳಿ ಜಂಗಮ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯಿಂದ ಕೊಂಡೋತ್ಸವ, ಸಾಲುಪಂಕ್ತಿ ಅನ್ನದಾಸೋಹ, ಸಿಡಿಮದ್ದು ಪ್ರದರ್ಶನ ನಡೆಯಿತು. ದೇವಸ್ಥಾನಕ್ಕೆ ವಿಶೇಷವಾಗಿ ವಿದ್ಯುತ್ ದೀಪಾಲಂಕಾರ, ಹೂವಿನ ಅಲಂಕಾರ ಮಾಡಲಾಗಿತ್ತು.

ಶಾಸಕ ಡಿ.ರವಿಶಂಕರ್, ಸುನಿತಾ ರವಿಶಂಕರ್, ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶಪ್ರಸಾದ್, ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್, ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಕೆಂಪರಾಜು, ಎ.ಎಸ್.ಚನ್ನಬಸಪ್ಪ, ಚಂದ್ರಶೇಖರ್, ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಸಮಿತಿ ಅಧ್ಯಕ್ಷ ಆರ್.ಎಚ್.ನಟರಾಜ್, ಕಾರ್ಯದರ್ಶಿ ಎಸ್.ವಿ.ಸುರೇಶ್, ಉಪಾಧ್ಯಕ್ಷ ಕೆಂಪಣ್ಣ, ಖಜಾಂಚಿ ಅರುಣ ಬಿ.ನರಗುಂದ, ಪುರಸಭೆ ಸದಸ್ಯರಾದ ಕೆ.ಪಿ.ಪ್ರಭುಶಂಕರ್, ವೀಣಾ ವೃಷಬೇಂದ್ರ, ಮಂಜುಳಾ ಚಿಕ್ಕವೀರು, ನಟರಾಜ್, ಶಿವಕುಮಾರ್, ಶಂಕರ್, ಪ್ರಶಾಂತ್, ದಿನೇಶ್, ಲೋಕೇಶ್, ಗಣೇಶ್, ಭೋಜರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT