ನಂಜನಗೂಡು: ನಗರದ ಕಪಿಲಾ ನದಿ ತೀರದ ಸ್ನಾನಘಟ್ಟದಲ್ಲಿ ಪುಣ್ಯ ಸ್ನಾನ ಮಡುವ ಮಹಿಳೆಯರು ಬಟ್ಟೆ ಬದಲಾಯಿಸುವ ಅನುಕೂಲಕ್ಕಾಗಿ ಮೊಬೈಲ್ ಬೂತ್ನ್ನು ಶುಕ್ರವಾರ ಯುವ ಬ್ರಿಗೇಡ್ ಸಂಘಟನೆಯ ಸದಸ್ಯರು ಅಳವಡಿಸಿದರು.

ಯುವ ಬ್ರಿಗೇಡ್ ರಾಜ್ಯ ಸಂಚಾಲಕ ಚಂದ್ರಶೇಖರ್ ಮಾತನಾಡಿ, ಕಪಿಲಾ ನದಿಯಲ್ಲಿ ಪುಣ್ಯ ಸ್ನಾನ ಮಾಡುವ ಮಹಿಳಾ ಭಕ್ತರಿಗೆ ಬಟ್ಟೆ ಬದಲಾಯಿಸಲು ನದಿ ತೀರದಲ್ಲಿ ಸುರಕ್ಷಿತ ಸ್ಥಳವಿಲ್ಲ. ಇದರಿಂದಾಗಿ ಹೆಚ್ಚಿನ ಸಂಖ್ಯೆಯ ಜನರು ಗೋಡೆ ಅಥವಾ ಮರಗಳ ಮರೆಯಲ್ಲಿ ಬಟ್ಟೆ ಬದಲಾಯಿಸಿಕೊಳ್ಳುವಂತಾಗಿದೆ. ಸ್ನಾನ ಘಟ್ಟದ ಬಳಿ ಕಿರು ಮೊಬೈಲ್ ಬೂತ್ ಅಳವಡಿಸಲಾಗಿದ್ದು, ಇದರಿಂದ ಮಹಿಳೆಯರಿಗೆ ಅನುಕೂಲವಾಗುತ್ತದೆ. ಇಂತಹ ಬೂತ್ ಅವಶ್ಯಕತೆ ಹೆಚ್ಚಿದ್ದು, ಸ್ವಯಂ ಸೇವಾ ಸಂಸ್ಥೆಗಳು ಹೆಚ್ಚಿನ ಬೂತ್ ಅಳವಡಿಸಬೇಕು ಎಂದು ಮನವಿ ಮಾಡಿದರು.

ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಎನ್.ಟಿ.ಗಿರೀಶ್, ಉದ್ಯಮಿ ಜಿ.ಕೆ.ಮಂಜುನಾಥ್, ಯುವ ಬ್ರಿಗೇಡ್ ಸಂಘಟನೆಯ ಸುನೀಲ್, ಅರ್ಜುನ್ , ಶ್ರೀಕಂಠೇಶ್ವರ ದೋಣಿ ನಡೆಸುವವರ ಸಂಘದವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.