ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಕ್ಕೆ ಹೊಸ ಫಾಂಟ್ ‘ಬಂಡೀಪುರ’: ತಿ.ನರಸೀಪುರದ ಯುವಕ ಆರ್.ಮಂಜುನಾಥ ವಿನ್ಯಾಸ

Last Updated 21 ಜನವರಿ 2022, 6:51 IST
ಅಕ್ಷರ ಗಾತ್ರ

ತಿ.ನರಸೀಪುರ: ಯೂನಿಕೋಡ್‌ನಲ್ಲಿ ಬಳಸಲು ಕನ್ನಡದ ಹೊಸ ಫಾಂಟ್‌ವೊಂದನ್ನು ಪಟ್ಟಣದ ಯುವಕ ಆರ್.ಮಂಜುನಾಥ ವಿನ್ಯಾಸಗೊಳಿಸಿ ಸಂಕ್ರಾಂತಿ ದಿನದಂದು ಸಾರ್ವಜನಿಕರ ಬಳಕೆಗೆ ನೀಡಿದ್ದಾರೆ.

ಮೈಸೂರಿನ‌ ಖಾಸಗಿ ಅನಿಮೇಶನ್ ಕಂಪನಿಯಲ್ಲಿ ಶಿಕ್ಷಕರಾಗಿರುವ ಮಂಜುನಾಥ, ತಾವು ಅಭಿವೃದ್ಧಿಪಡಿಸಿರುವ ಫಾಂಟ್‌ಗೆ ‘ಎಟಿಎಸ್‌ ಬಂಡೀಪುರ’ ಎಂಬ ಹೆಸರಿಟ್ಟು ಚಾಮರಾಜನಗರ ಜಿಲ್ಲೆಗೆ ಗೌರವ ಸಲ್ಲಿಸಿದ್ದಾರೆ.

ಶಾಲಾ ದಿನಗಳಿಂದಲೂ‌ ಚಿತ್ರಕಲೆ ಹಾಗೂ ಅಕ್ಷರಗಳನ್ನು ವಿಭಿನ್ನ ಮಾದರಿಯಲ್ಲಿ ಬರೆಯುವ ಹವ್ಯಾಸ ರೂಢಿಸಿಕೊಂಡ ಅವರು ಬಳಿಕ‌ ಡಿಜಿಟಲ್ ತಂತ್ರಜ್ಞಾನದತ್ತ ಆಸಕ್ತರಾಗಿ ತಮ್ಮ ಚಿತ್ರಕಲೆ, ಅಕ್ಷರ ವಿನ್ಯಾಸಕ್ಕೆ ಡಿಜಿಟಲ್ ಸ್ಪರ್ಶ ನೀಡುತ್ತಿದ್ದಾರೆ. ಅದರ ಫಲವಾಗಿ ಒಂದು ವರ್ಷದ ಪರಿಶ್ರಮದಲ್ಲಿ ಈ ಫಾಂಟ್‌ ವಿನ್ಯಾಸಗೊಳಿಸಿದ್ದಾರೆ.

ಶೀರ್ಷಿಕೆ, ಬ್ಯಾನರ್‌, ಪೋಸ್ಟರ್‌ಗಳಲ್ಲಿ ಮತ್ತು ಇತರ ಕಡೆ ದೊಡ್ಡ ಗಾತ್ರಗಳಲ್ಲಿ ಅಕ್ಷರಗಳನ್ನು ಬಳಸಲು ಇದು ಸಹಕಾರಿಯಾಗಿದೆ. ಅಕ್ಷರದ ಶೈಲಿಯು ಆನೆಯಿಂದ ಪ್ರೇರಿತವಾಗಿದ್ದು, ತುಂಬಾ ಚೂಪಾದ ಅಂಚುಗಳು ಮತ್ತು ಅನಿಯಮಿತ ದಪ್ಪವನ್ನು ಹೊಂದಿದೆ.

‘ಚಾಮರಾಜನಗರ ಜಿಲ್ಲೆಯ ಬಂಡೀಪುರ ಅರಣ್ಯ ಪ್ರದೇಶ ಆನೆಗಳ ತಾಣವಾಗಿದ್ದು, ಆನೆಗಳಿಂದ ಪ್ರೇರಿತನಾಗಿ ಈ ಫಾಂಟ್ ವಿನ್ಯಾಸಗೊಳಿಸಿದ್ದೇನೆ. ಅಕ್ಷರಗಳನ್ನು ಮೊದಲು ಕೈಯಲ್ಲಿ ಸ್ಕೆಚ್ ಮಾಡಿ ನಂತರ ಅದಕ್ಕೆ ಡಿಜಿಟಲ್ ರೂಪ ನೀಡಿ ಹೊಸ ಫಾಂಟ್ ರೂಪಿಸಲಾಗಿದೆ. ಇದು ನನ್ನ ಮೊದಲ ಪ್ರಯೋಗ. ನಮ್ಮದೇ ಸಂಸ್ಥೆ ಅಕ್ಷರ ಟೈಪ್ ಸ್ಟುಡಿಯೋನಲ್ಲಿ (ಎಟಿಎಸ್‌) ವಿನ್ಯಾಸಗೊಳಿಸಿರುವುದರಿಂದ ಎಟಿಎಸ್ ಬಂಡೀಪುರ ಎಂಬ ಹೆಸರಿಟ್ಟಿದ್ದೇನೆ’ ಎಂದು ಮಂಜುನಾಥ್‌ ಹೇಳಿದರು.

‘ಈ ಫಾಂಟ್ ಯೂನಿಕೋಡ್‌ನಲ್ಲಿದ್ದು, ಎಲ್ಲಾ ಕೀಬೋರ್ಡ್‌ಗಳಲ್ಲೂ ಬಳಸಬಹುದು. ಇಂಗ್ಲಿಷ್‌, ಲ್ಯಾಟಿನ್ ಸೇರಿದಂತೆ 125 ಲಿಪಿಗಳನ್ನು ಬೆಂಬಲಿಸುತ್ತದೆ. ಹಳಗನ್ನಡವನ್ನು‌‌ ಕೂಡ ಬಳಸಲಾಗಿದೆ’ ಎಂದು ಮಾಹಿತಿ ನೀಡಿದರು.

ಬಾಲ್ಯದಿಂದಲೂ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿರುವ ಮಂಜುನಾಥ್‌, ಕ್ರಮೇಣ ಚಿತ್ರಕಲೆಗೆ ಮತ್ತಷ್ಟು ಆಧುನಿಕತೆ ಹಾಗೂ ತಾಂತ್ರಿಕ ಸ್ಪರ್ಶ ನೀಡಲು ಡಿಜಿಟಲ್‌ ತಂತ್ರಜ್ಞಾನ ಕರಗತ ಮಾಡಿಕೊಂಡಿದ್ದಾರೆ. ಇದರ ಜತೆಯಲ್ಲೇ ತಮ್ಮದೇ ಆಸಕ್ತಿಯಿಂದ ಹೊಸ ಫಾಂಟ್‌ವೊಂದನ್ನು ಪರಿಚಯಿಸಿದ್ದಾರೆ.

***

ಕನ್ನಡಕ್ಕೆ ಹೊಸ ಫಾಂಟ್‌ ನೀಡಬೇಕೆಂಬುದು ನನ್ನ ಬಹುದಿನಗಳ ಆಸೆಯಾಗಿತ್ತು. ‘ಎಟಿಎ‌ಸ್‌ ಬಂಡೀಪುರ’ ಮೂಲಕ ಅದನ್ನು ಸಾಧ್ಯವಾಗಿಸಿದ್ದೇನೆ.

– ಆರ್.ಮಂಜುನಾಥ್, ಎಟಿಎಸ್‌ ಬಂಡೀಪುರ ಫಾಂಟ್‌ ವಿನ್ಯಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT