ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಇಎಸ್‌ಸಿಇಗೆ ಎನ್ಐಆರ್‌ಎಫ್ ರ‍್ಯಾಂಕ್

Published 9 ಜೂನ್ 2023, 16:00 IST
Last Updated 9 ಜೂನ್ 2023, 16:00 IST
ಅಕ್ಷರ ಗಾತ್ರ

ಮೈಸೂರು: ‘ಮಂಡ್ಯದ ಪಿಇಎಸ್ ಎಂಜಿನಿಯರಿಂಗ್ ಕಾಲೇಜು ಜೂನ್‌ 5ರಂದು ಪ್ರಕಟವಾದ ರಾಷ್ಟ್ರಮಟ್ಟದ ಎನ್ಐಆರ್‌ಎಫ್ ರ‍್ಯಾಂಕ್‌ನಲ್ಲಿ 151ರಿಂದ 200ರ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಸತತ 5 ವರ್ಷಗಳಿಂದ ಸ್ಥಿರತೆ ಕಾಯ್ದುಕೊಂಡಿದೆ’ ಎಂದು ಕಾಲೇಜು ಪ್ರಾಂಶುಪಾಲ ಡಾ.ಆರ್.ಎಂ.ಮಹಾಲಿಂಗೇಗೌಡ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಇದು ಕೇಂದ್ರ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯ ಬೆಂಬಲಿತ ರ‌್ಯಾಂಕಿಂಗ್ ಆಗಿದೆ. ಕಳೆದ 5 ವರ್ಷಗಳಿಂದ 200ರೊಳಗೆ ರ‌್ಯಾಂಕ್ ಪಡೆಯುತ್ತಿದ್ದೇವೆ. ಎನ್ಐಆರ್‌ಎಫ್ ಇನೋವೇಶನ್ ರ‌್ಯಾಂಕಿಂಗ್‌ನಲ್ಲಿಯೂ 11ರಿಂದ 50ರ ಗುಂಪಿನಲ್ಲಿ ಸ್ಥಾನ ಪಡೆಯಲಾಗಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

‘ದೇಶದಾದ್ಯಂತ 2,600 ಎಂಜಿನಿಯರಿಂಗ್ ಕಾಲೇಜುಗಳು ಈ ರ‌್ಯಾಂಕಿಂಗ್ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದವು. ನಮ್ಮಲ್ಲಿನ ಮೂಲಸೌಲಭ್ಯ, ಶಿಕ್ಷಣ, ಸಂಶೋಧನೆ ಮತ್ತು ವೃತ್ತಿಪರತೆಯನ್ನು ಆಧರಿಸಿ ರ‍್ಯಾಂಕ್‌ ನೀಡಲಾಗಿದೆ. ನಮಗೆ ದೊರೆತಿರುವ ಈ ಸ್ಥಾನವೂ ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಕ್ಯಾಂಪಸ್‌ನಲ್ಲಿನ ಉದ್ಯೋಗಾವಕಾಶವನ್ನೂ ಹೆಚ್ಚಿಸಿದೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಡೀನ್ ಡಾ.ಆರ್.ಗಿರೀಶ್, ಅಕಾಡೆಮಿ ಉಪ ಡೀನ್ ಡಾ.ಡಿ.ಆರ್.ಉಮೇಶ್, ಪ್ಲೇಸ್‌ಮೆಂಟ್ ಅಧಿಕಾರಿ ಡಾ.ಎಸ್.ವಿನಯ್, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಮಹೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT