ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉತ್ತರ ಭಾರತಕ್ಕೆ ತೆರಳಿದ್ದ ಮೈಸೂರಿನ ಜನ ಸುರಕ್ಷಿತ’

Published 13 ಜುಲೈ 2023, 2:55 IST
Last Updated 13 ಜುಲೈ 2023, 2:55 IST
ಅಕ್ಷರ ಗಾತ್ರ

ಮೈಸೂರು: ಉತ್ತರ ಭಾರತದಲ್ಲಿ ಉಂಟಾಗಿರುವ ಅತಿವೃಷ್ಟಿ ಯಿಂದಾಗಿ ಕುಲುಮನಾಲಿ ಹಾಗೂ ಅಮರನಾಥ ಪ್ರವಾಸಕ್ಕೆ ತೆರಳಿದವರು ಸಿಲುಕಿಕೊಂಡಿದ್ದು ಅಲ್ಲಿನ ರಾಜ್ಯ ಸರ್ಕಾರವು ರಕ್ಷಣಾ ಕಾರ್ಯ ನಡೆಸುತ್ತಿದ್ದು, ಮೈಸೂರಿನಿಂದ ತೆರಳಿದ್ದ 4 ಜನ ಸುರಕ್ಷಿತವಾಗಿದ್ದಾರೆ.

ರಾಜ್ಯದ ವಿವಿಧ ಭಾಗಗ ಳಿಂದ ತೆರಳಿರುವವರನ್ನು ರಕ್ಷಣೆ ಮಾಡಲಾಗುತ್ತಿದೆ. ಶ್ರೀನಿಧಿ, ನವ್ಯ, ವೀರ್‌ ಹಾಗೂ ಅವರ ಪತ್ನಿ ಪ್ಯಾಕೇಜ್‌ ಟೂರ್‌ನಲ್ಲಿ ಮೈಸೂರಿನಿಂದ ಹೋಗಿದ್ದರು. ಭಾನುವಾರ ರಾತ್ರಿಯಿಂದ ಸಂಪರ್ಕಕ್ಕೆ ಲಭ್ಯವಾಗಿರಲಿಲ್ಲ. ಈ ಬಗ್ಗೆ ಅವರ ಕುಟುಂಬ ಆತಂಕಕ್ಕೆ ಒಳಗಾಗಿತ್ತು.

‘ಕುಲು ಮನಾಲಿಗೆ ಜಿಲ್ಲೆಯಿಂದ ತೆರಳಿದ್ದ ನಾಲ್ವರೂ ಸುರಕ್ಷಿತವಾಗಿದ್ದಾರೆ. ಅಮರನಾಥ ಪ್ರವಾಸಕ್ಕೆ ತೆರಳಿದವರ ಮಾಹಿತಿ ಇಲ್ಲ’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT