ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸೂರು: ವಿದ್ಯಾರ್ಥಿಗಳಿಂದ ನೀರಿನ ಟ್ಯಾಂಕ್‌ ಸ್ವಚ್ಛತೆ ಆರೋಪ

Published 21 ಮಾರ್ಚ್ 2024, 13:24 IST
Last Updated 21 ಮಾರ್ಚ್ 2024, 13:24 IST
ಅಕ್ಷರ ಗಾತ್ರ

ಹುಣಸೂರು: ತಾಲ್ಲೂಕಿನ ಹಗರನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಬಳಸಿಕೊಂಡು ಮೇಲ್ಚಾವಣಿಯ ನೀರಿನ ಟ್ಯಾಂಕ್ ಶುಚಿಗೊಳಿಸಿದ ಘಟನೆ ನಡೆದಿದೆ. ಘಟನೆಯ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ‘ಇವು ಈಚಿನ ವಿಡಿಯೊಗಳಲ್ಲ’ ಎಂದು ಇಲ್ಲಿನ ಶಿಕ್ಷಕರು ಸಮಜಾಯಿಷಿ ನೀಡುತ್ತಾರೆ.

ಶಾಲೆಯಲ್ಲಿ 187 ವಿದ್ಯಾರ್ಥಿಗಳಿದ್ದು, ಅವರ ಉಪಯೋಗಕ್ಕಾಗಿ 1 ಸಾವಿರ ಲೀಟರ್‌ ಸಾಮರ್ಥ್ಯದ ಎರಡು ನೀರಿನ ಟ್ಯಾಂಕ್‌ಗಳನ್ನು ಕಟ್ಟಡದ ಮೇಲ್ಭಾಗದಲ್ಲಿರಿಸಲಾಗಿದೆ. ಅವುಗಳನ್ನು ವಿದ್ಯಾರ್ಥಿಗಳು ಸ್ವಚ್ಚಗೊಳಿಸುತ್ತಿರುವ ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಬಿಡಲಾಗಿದೆ. ಸ್ವಚ್ಛತೆಗೆ ವಿದ್ಯಾರ್ಥಿಗಳನ್ನು ಬಳಸಿಕೊಂಡಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಘಟನೆ ಕುರಿತು ಮುಖ್ಯ ಶಿಕ್ಷಕ ನಾಗೇಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ ‘ಇದು ಈಚಿನ ಘಟನೆಯಂತೂ ಅಲ್ಲ. ನಮ್ಮ ಶಾಲೆಯಲ್ಲಿ ಇಂಥ ಚಟುವಟಿಕೆ ನಡೆದಿಲ್ಲ’ ಎಂದು ಸಮಜಾಯಿಷಿ ನೀಡಿದರು.

‘ಶಾಲೆಯಲ್ಲಿ ಗಣಿತ ವಿಷಯದ ಸಹಶಿಕ್ಷಕ ಪ್ರಸನ್ನ ಎಂಬುವವರು 2 ವರ್ಷದಿಂದ ಪ್ರಭಾರ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರ ಅವಧಿಯಲ್ಲಿ ಈ ಕೆಲಸವಾಗಿರಬಹುದು. ಈಚೆಗೆ ಅವರು ವೈಯಕ್ತಿಕ ಕಾರಣದಿಂದ ಶಾಲೆಗೆ ಅನಧಿಕೃತವಾಗಿ ಗೈರಾಗಿದ್ದರು. ಸೇವೆಗೆ ಬಂದ ನಂತರ ಗೈರು ಹಾಜರಿ ಅವಧಿಯ ತುಟ್ಟಿಭತ್ಯೆ ಮತ್ತು ಸಂಬಳ ಪಾವತಿಸಲು ಶಿಫಾರಸು ಮಾಡುವಂತೆ ಒತ್ತಡ ಹಾಕುತ್ತಿದ್ದರು. ಅದಕ್ಕೆ ನಾನು ಒಪ್ಪಿರಲಿಲ್ಲ. ಈ ಬಗ್ಗೆ ಬಿಇಒ ಗಮನಕ್ಕೂ ತಂದಿದ್ದೆ. ಅದರಿಂದ ಸಿಟ್ಟಿಗೆದ್ದ ಪ್ರಸನ್ನ ನನಗೆ ತಕ್ಕಪಾಠ ಕಲಿಸುವುದಾಗಿ ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ವಿಡಿಯೊಗಳನ್ನು ಹರಿಬಿಟ್ಟಿರಬಹುದು’ ಎಂದು ದೂರಿದರು.

ಶಾಲೆಯಲ್ಲಿ ಅನ್ಯ ಕೆಲಸಗಳಿಗೆ ಮಕ್ಕಳನ್ನು ಬಳಕೆ ಮಾಡಿಕೊಳ್ಳುವಂತಿಲ್ಲ. ಶುಕ್ರವಾರವೇ ಶಾಲೆಗೆ ಭೇಟಿ ಕೊಟ್ಟು ವಿಚಾರಣೆ ನಡೆಸುತ್ತೇನೆ

-ರೇವಣ್ಣ ಕ್ಷೇತ್ರ ಶಿಕ್ಷಣಾಧಿಕಾರಿ ಹುಣಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT