ಮೈಸೂರು: ‘ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ರೂಪಿಸಿದ್ದ ಗ್ರಾಮಸಡಕ್ ಸೇರಿದಂತೆ ಹಲವು ಯೋಜನೆಗಳು ಈಗಲೂ ಜಾರಿಯಾಗುತ್ತಿವೆ. ಇದರಿಂದ ಜನರಿಗೆ ಲಾಭವಾಗುತ್ತಿದೆ’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಮರಿಸಿದರು.

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜಯಂತಿ ಆಚರಣೆ, ಅಟಲ್ ಸ್ಮೃತಿ ವರ್ಷ ಮತ್ತು ಸುಶಾಸನ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಂದಿನ ವಿರೋಧ ಪಕ್ಷದವರು ಕೂಡ ವಾಜಪೇಯಿ ಅವರ ಪರವಾಗಿ ನಿಲ್ಲುತ್ತಿದ್ದ ವಾತಾವರಣವಿತ್ತು. ಹಲವು ಮಸೂದೆಗಳನ್ನು ಒಪ್ಪುತ್ತಿದ್ದರು. ಅಂತಹ ಗೌರವ ಅವರಿಗೆ ಸಿಗುತ್ತಿತ್ತು. ಅವರವರ ಪಕ್ಷದ ‘ವಿಪ್’ ಉಲ್ಲಂಘಿಸಿಯೂ ಬೆಂಬಲ ನೀಡುತ್ತಿದ್ದರು. ನಿಜವಾದ ಪ್ರಜಾಪ್ರಭುತ್ವ ಹಾಗೂ ನಾಯಕತ್ವವನ್ನು ಮೆಚ್ಚಿ ಸಹಕರಿಸುತ್ತಿದ್ದರು’ ಎಂದರು.

‘ಸಂಸತ್ತಿನಲ್ಲಿ ಈಗಿರುವ ಹಿರಿಯರೆಲ್ಲರೂ ಈಗಲೂ ಅವರನ್ನು ಸ್ಮರಿಸುತ್ತಾರೆ. ಅವೆಲ್ಲಾ ಸಿಹಿ ನೆನಪುಗಳೆಂದು ಹೇಳುತ್ತಾರೆ. ಇದು ನಿಜಕ್ಕೂ ಪ್ರೇರಣೆಯಾದುದು. ಅಂತಹ ವಾತಾವರಣವನ್ನು ಭವಿಷ್ಯದಲ್ಲಿ ನಾವೂ ರೂಪಿಸಬೇಕು ಎಂಬ ನಿಟ್ಟಿನಲ್ಲಿ ಪ್ರೇರಣೆಯಾಗಿದ್ದಾರೆ’ ಎಂದು ಹೇಳಿದರು.

‘ಈ ಅಧಿವೇಶನದಲ್ಲಿ ನಾವು ಶಾಂತಿ ಮಸೂದೆ ಮಂಡಿಸಲು ಅವಕಾಶವಾಗಿದೆ (ಅಣು ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಅವಕಾಶ ಕಲ್ಪಿಸುವ ಭಾರತದ ಪ್ರಗತಿಗಾಗಿ ಅಣುಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್ಎಚ್ಎಎನ್ಟಿಐ– ಶಾಂತಿ ಮಸೂದೆ). ಅಂದಿನ ಕಾಲದಲ್ಲಿ ವಾಜಪೇಯಿ ಅವರು ಅಣುಶಕ್ತಿಯ ಪರೀಕ್ಷೆ ಮಾಡಿದ್ದ ಕಾರಣದಿಂದಲೇ ಇದೆಲ್ಲವೂ ಆಗುತ್ತಿದೆ. ಆಗ ಬಹಳಷ್ಟು ಅಂತರರಾಷ್ಟ್ರೀಯ ಒತ್ತಡಗಳಿದ್ದರೂ ಮಾಡಿದ್ದ ಕೆಲಸದಿಂದ ಎಲ್ಲರಿಗೂ ಲಾಭವಾಗುವ ಕ್ರಮ ವಹಿಸುವುದಕ್ಕೆ ನಮಗೆ ಸಾಧ್ಯವಾಗಿದೆ’ ಎಂದು ತಿಳಿಸಿದರು.

‘ವಿಕಸಿತ ಭಾರತಕ್ಕೆ ಅವರು ಅಡಿಪಾಯ ಹಾಕಿದ್ದರು ಎಂದರೆ ತಪ್ಪಾಗುವುದಿಲ್ಲ. ಪಕ್ಷದ ಸಂಘಟನೆ, ಹೋರಾಟ ಸಾಧ್ಯವಾಗಿರುವುದು ಅವರ ಪರಿಶ್ರಮ ಮತ್ತು ನಾಯಕತ್ವದಿಂದಲೇ. ಇದಕ್ಕಾಗಿ ಅವರ ಜೀವನವನ್ನು ಸದಾ ಸ್ಮರಿಸಬೇಕು’ ಎಂದರು.

ಮಾಜಿ ಸಂಸದ ಪ್ರತಾಪ ಸಿಂಹ ಮಾತನಾಡಿ, ‘ವಾಜಪೇಯಿ ಅಜಾತ ಶತ್ರು ಆಗಿದ್ದರು. ಕೋಟ್ಯಂತರ ಕಾರ್ಯಕರ್ತರ ಮಾರ್ಗದರ್ಶಕರಾಗಿದ್ದರು. ಅವರ ಉತ್ತಮ ಆಡಳಿತ ಮಾದರಿಯಾದುದು’ ಎಂದು ಸ್ಮರಿಸಿದರು.

ಪಕ್ಷದ ಹಿರಿಯರಾದ ತೋಂಟದಾರ್ಯ, ಕೆ.ಎನ್.ಪುಟ್ಬಬುದ್ದಿ ಹಾಗೂ ಎನ್.ವಿ. ಫಣೀಶ್ ಅವರನ್ನು ಸನ್ಮಾನಿಸಲಾಯಿತು.

ಪಕ್ಷದ ನಗರ ಜಿಲ್ಲಾ ಘಟಕದ ಅಧ್ಯಕ್ಷ ಎಲ್. ನಾಗೇಂದ್ರ, ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್. ಸುಬ್ಬಣ್ಣ, ಮುಖಂಡರಾದ ಅಶೋಕ್, ದಿನೇಶ್ಗೌಡ, ಮಂಗಳಾ ಸೋಮೇಖರ್, ರಾಕೇಶ್ಗೌಡ, ಎಸ್.ಕೆ. ದಿನೇಶ್, ಸದಾನಂದ, ರಘು, ಪ್ರಕಾಶ್, ಸುರೇಶ್, ರವಿ ಮೊದಲಾದವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.