ಮೈಸೂರು: ಅತ್ತ ಭಾರತದ ಪುರುಷರ ಹಾಕಿ ತಂಡ ಲಂಡನ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಬೆನ್ನಲ್ಲೇ ಇತ್ತ ಮೈಸೂರಿನ ಹಾಕಿ ಆಟಗಾರರಿಗೂ ಒಂದು ಸಂತಸದ ಸುದ್ದಿ ಇದೆ!

ಸುಮಾರು ಒಂದು ದಶಕದಿಂದಲೂ ಇಲ್ಲಿನ ಹಾಕಿ ಆಟಗಾರರು ಮತ್ತು ಅಭಿಮಾನಿಗಳ ಬೇಡಿಕೆಯಾಗಿದ್ದ ಆ್ಯಸ್ಟ್ರೋ ಟರ್ಫ್ ಮೈದಾನ ತಯಾರಾ ಗುವ ಕಾಲ ಸನ್ನಿಹಿತವಾಗಿದೆ. ಇಲ್ಲಿಯ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ರುವ ಹಾಕಿ ಮೈದಾನಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಹಾಕಿಸಲಿರುವ ಆ್ಯಸ್ಟ್ರೋ ಟರ್ಫ್ ಕಾಮಗಾರಿಗೆ ಶನಿವಾರ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು ಚಾಲನೆ ನೀಡುವರು. ಜೊತೆಗೆ ಒಳಾಂಗಣ ಕ್ರೀಡಾಂಗಣದಲ್ಲಿರುವ ಬ್ಯಾಡ್ಮಿಂಟನ್ ಅಂಕಣಕ್ಕೆ ಕಟ್ಟಿಗೆಯ ನೆಲಹಾಸು ಕಾಮಗಾರಿಗೂ ಅವರು ಶಿಲಾನ್ಯಾಸ ನೆರವೇರಿಸುವರು.

`ಹಾಕಿ ಮೈದಾನದ ಆ್ಯಸ್ಟ್ರೋಟರ್ಫ್ಗೆ 2.85 ಕೋಟಿ ರೂಪಾಯಿ ಮತ್ತು ಬ್ಯಾಡ್ಮಿಂಟನ್ ಕೋರ್ಟ್ಗೆ 91 ಲಕ್ಷ ರೂಪಾಯಿ ವೆಚ್ಚವನ್ನು ಮುಡಾ ಭರಿಸಲಿದೆ. ಶೀಘ್ರದಲ್ಲಿಯೇ ಕಾಮಗಾರಿ ಆರಂಭವಾಗಲಿದೆ~ ಎಂದು ಮುಡಾ ಅಧ್ಯಕ್ಷ ಎಲ್. ನಾಗೇಂದ್ರ ಮತ್ತು ಆಯುಕ್ತ ಜಿ.ಎಂ. ಬೆಟಸೂರಮಠ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸೀನಿಯರ್ ಮಹಿಳಾ ಮತ್ತು ಜೂನಿಯರ್ ಬಾಲಕಿಯರ ವಸತಿ ನಿಲಯಗಳು ಇಲ್ಲಿವೆ. ಇಲ್ಲಿ ಮಹಿಳೆಯ ರಿಗೆ ಹಾಕಿ ತರಬೇತಿಯನ್ನು ನೀಡಲಾ ಗುತ್ತಿದೆ. ಸದ್ಯ ರಾಷ್ಟ್ರೀಯ ಹಾಕಿ ತಂಡದ ಶಿಬಿರದಲ್ಲಿರುವ ಮುತ್ತಮ್ಮ, ಹರಿಣಾಕ್ಷಿ ಇಲ್ಲಿಯವರೇ. ರಾಜ್ಯ, ರಾಷ್ಟ್ರಮಟ್ಟದಲ್ಲಿ ಆಡಲು ಹೋಗುವ ಆಟಗಾರರು ಮೈಸೂರಿನಲ್ಲಿದ್ದಾರೆ. ಉನ್ನತ ಮಟ್ಟದ ಹಾಕಿ ಟೂರ್ನಿ ಗಳನ್ನು ಆಯೋಜಿಸಲೂ ಈ ಆ್ಯಸ್ಟ್ರೋ ಟರ್ಫ್ ಅಂಕಣ ಅನುಕೂಲ ವಾಗುತ್ತದೆ.

ಪಕ್ಕದ ಕೊಡಗು ಜಿಲ್ಲೆ ಮತ್ತು ಬೆಂಗಳೂರಿನಲ್ಲಿ ಮಾತ್ರ ಈ ಸೌಲಭ್ಯ ಇದೆ. ಮೈಸೂರಿನ ಹಾಕಿ ತರಬೇತು ದಾರರು, ಆಟಗಾರರು ಮತ್ತು ಸಂಘ ಸಂಸ್ಥೆಗಳೂ ಮೊದಲಿನಿಂದಲೂ ಒತ್ತಾಯಿಸುತ್ತಿವೆ. ಆದರೆ ಇಲ್ಲಿಯ ವರೆಗೂ ಕೇವಲ ಭರವಸೆಗಳು ಮಾತ್ರ ಸಿಕ್ಕಿದ್ದವು. ಕಳೆದ ವರ್ಷ ಚಾಮುಂಡಿ ವಿಹಾರ ಕ್ರೀಡಾಂಗಣಕ್ಕೆ ಸಿಂಥೇಟಿಕ್ ಟ್ರ್ಯಾಕ್ ಅಳವಡಿಸುವ ಕಾಮಗಾರಿಗೆ ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಿಲಾನ್ಯಾಸ ಮಾಡಿದ್ದರು. ಈಗ ಎರಡು ಪ್ರಮುಖ ಕಾಮಗಾರಿಗಳಿಗೆ ಶಿಲಾನ್ಯಾಸ ನಡೆಯುತ್ತಿದೆ.

`ಇಲಾಖೆಯ ವಸತಿ ನಿಲಯದಲ್ಲಿ ಪ್ರತಿಭಾನ್ವಿತ ಹಾಕಿ ಆಟಗಾರ್ತಿ ಯರಿದ್ದಾರೆ. ಅಥ್ಲೀಟ್ಗಳೂ ಇದ್ದಾರೆ. ಆದ್ದರಿಂದ ಅಥ್ಲೆಟಿಕ್ಸ್ಗೆ ಸಿಂಥೆಟಿಕ್ ಟ್ರ್ಯಾಕ್ ಮತ್ತು ಹಾಕಿ ಕ್ರೀಡಾಂಗಣಕ್ಕೆ ಅಂತರರಾಷ್ಟ್ರೀಯ ಗುಣಮಟ್ಟದ ಆ್ಯಸ್ಟ್ರೋಟರ್ಫ್ ಅಗತ್ಯವಿದೆ. ಜಾಗತಿಕ ಟೆಂಡರ್ ಕರೆದಿದ್ದು, ಬಹಳ ಶೀಘ್ರವಾಗಿ ಕಾಮಗಾರಿ ಸಂಪೂರ್ಣ ಗೊಳ್ಳುವ ಭರವಸೆ ಇದೆ. ಉತ್ತಮ ಗುಣಮಟ್ಟದ ಟರ್ಫ್ ಅಳವಡಿಸ ಲಾಗುತ್ತಿದೆ~ ಎಂದು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್ `ಪ್ರಜಾವಾಣಿ~ಗೆ ತಿಳಿಸಿದರು.

ಇಲ್ಲಿರುವ ಒಳಾಂಗಣ ಕ್ರೀಡಾಂ ಗಣಕ್ಕೆ ರಾಷ್ಟ್ರೀಯ ಕ್ರೀಡೆಗಳನ್ನು ಆಯೋಜಿಸುವಂತಹ ಅನುಕೂಲ ತೆಗಳೂ ಇವೆ. ಈಗ ಅದಕ್ಕೆ ಹೊಸ ಕಟ್ಟಿಗೆಯ ನೆಲಹಾಸು ಅಳವಡಿಸುವು ದರಿಂದ ದೊಡ್ಡಮಟ್ಟದ ಟೂರ್ನಿಗಳ ಆಯೋಜನೆ ಮತ್ತು ತರಬೇತಿ ಆಯೋಜಿಸಬಹುದು. ಮುಂದಿನ ದಸರೆಯ ಹೊತ್ತಿಗೆ ಮೂರು ಕಾಮಗಾರಿಗಳು ಮುಗಿದು ಹೊಸ ರೂಪದ ಕ್ರೀಡಾಂಗಣ ಸಿದ್ಧವಾಗುವ ನಿರೀಕ್ಷೆ ಈಗ ಗರಿಗೆದರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.