ಇಂದಿನಿಂದ ನೀನಾಸಂ ಸಂಸ್ಕೃತಿ ಶಿಬಿರ

7

ಇಂದಿನಿಂದ ನೀನಾಸಂ ಸಂಸ್ಕೃತಿ ಶಿಬಿರ

Published:
Updated:
Deccan Herald

ಸಾಗರ: ಸಮೀಪದ ಹೆಗ್ಗೋಡಿನಲ್ಲಿ ಇಂದಿನಿಂದ ಅ. 10ರವರೆಗೆ ನೀನಾಸಂ ಸಂಸ್ಕೃತಿ ಶಿಬಿರ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ 9.30ರಿಂದ ಸಂಜೆ 6ರವರೆಗೆ ಉಪನ್ಯಾಸ, ಚರ್ಚೆ, ಸಂವಾದ, ಕಿರು ನಾಟಕ ಪ್ರದರ್ಶನವಿದ್ದು, ರಾತ್ರಿ 7ಕ್ಕೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಈ ಬಾರಿಯ ಶಿಬಿರವು ‘ಶಿಕ್ಷಣದಲ್ಲಿ ಕಲಿಕೆಯ ಬಿಕ್ಕಟ್ಟು’ ಎಂಬ ವಿಷಯವನ್ನು ಕೇಂದ್ರೀಕರಿಸಿದೆ. ಈ ಕುರಿತ ಉಪನ್ಯಾಸ, ಚರ್ಚೆಯಲ್ಲಿ ಡಾ.ಚಂದ್ರಶೇಖರ ಕಂಬಾರ, ಗೋಪಾಲ ಗುರು, ಪ್ರಕಾಶ್ ಆಮ್ಟೆ, ವೈದೇಹಿ, ಪ್ರಥ್ವಿದತ್ತ ಚಂದ್ರಶೋಭಿ, ತ್ರಿದೀಪ್ ಸುಹ್ಮದ್, ಕ್ಲಾಡ್ ಆಳ್ವಾರಸ್, ನಾರ್ಮಾ ಆಳ್ವಾರಸ್, ಸಮೀಕ್ ಬಂದೋಪಾಧ್ಯಾಯ, ಎಂ.ಎಸ್.ಶ್ರೀರಾಮ್, ವಿವೇಕ ಶಾನಭಾಗ, ಜಿ.ಎಸ್.ಜಯದೇವ್, ಸಂಜೀವ ಕುಲಕರ್ಣಿ, ಕೃಷ್ಣಮೂರ್ತಿ ಹನೂರು, ಶಿವಾನಂದ ಕಳವೆ, ದೀಪಾ ಗಣೇಶ್, ಶಿವಾನಂದ ಕೆರೆಮನೆ, ಸುಂದರ್ ಸಾರುಕೈ, ಸುಕನ್ಯಾ ರಾಮಗೋಪಾಲ ಪಾಲ್ಗೊಳ್ಳಲಿದ್ದಾರೆ.

ಅ.6ರಂದು ಬೆಳಿಗ್ಗೆ 9.30ಕ್ಕೆ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ಅ.7ರಂದು ಮಧ್ಯಾಹ್ನ 2.30ಕ್ಕೆ ಮುಂಬೈನ್ ಸುಶ್ಮಿತಾ ಮುಖರ್ಜಿ ಅವರಿಂದ ‘ನಾರಿಬಾಯಿ’ ಏಕವ್ಯಕ್ತಿ ರಂಗ ಪ್ರಯೋಗ ನಡೆಯಲಿದೆ. ಸಂಜೆ 7ಕ್ಕೆ ನೀನಾಸಂ ತಿರುಗಾಟ ನಾಟಕ ‘ಆಶ್ಚರ್ಯ ಚೂಡಾಮಣಿ’ (ನಿರ್ದೇಶನ: ಜೋಸೆಫ್ ಜಾನ್) ಪ್ರದರ್ಶನವಿದೆ.

ಅ.8ರಂದು ಮಧ್ಯಾಹ್ನ 2.3ಕ್ಕೆ ಆಟಮಾಟ ತಂಡದಿಂದ ಮಹದೇವ ಹಡಪದ ನಿರ್ದೇಶನದ ಕಥಾ ಪ್ರಸ್ತುತಿ ‘ಮೋಹನ ಸ್ವಾಮಿ’ ಕಿರು ರಂಗ ಪ್ರಯೋಗ ಪ್ರದರ್ಶನಗೊಳ್ಳಲಿದೆ. ಸಂಜೆ 7ಕ್ಕೆ ನೀನಾಸಂ ಬಳಗದಿಂದ ‘ಈಡಿಪಸ್’ (ನಿರ್ದೇಶನ : ಗಣೇಶ್ ಮಂದರ್ತಿ) ನಾಟಕ ಆಯೋಜಿಸಲಾಗಿದೆ.

ಅ.9ರಂದು ಮಧ್ಯಾಹ್ನ 2.30ಕ್ಕೆ ಥಿಯೇಟರ್ ಸಮುರಾಯ್ ತಂಡದಿಂದ ಎಚ್.ಎಸ್. ಶಿವಪ್ರಕಾಶ್ ನಾಟಕ ಆಧರಿಸಿದ ಪವಿತ್ರ ರಾಭಾ ನಿರ್ದೇಶನದ ‘ಮದುವೆ ಹೆಣ್ಣು’ ಕಿರು ರಂಗ ಪ್ರಯೋಗ ಆಯೋಜಿಸಲಾಗಿದೆ. ಸಂಜೆ 7ಕ್ಕೆ ತಮಿಳು ನಾಡಿನ ಮಣಲ್ ಮಗುಡಿ ತಂಡದಿಂದ ತಮಿಳು ನಾಟಕ ‘ಪೂಳಿಪ್ಪಾವೈ’ (ನಿರ್ದೇಶನ: ಎಸ್. ಮುರುಗ ಭೂಪತಿ) ಪ್ರದರ್ಶನಗೊಳ್ಳಲಿದೆ.

ಅ.10ರಂದು ಮಧ್ಯಾಹ್ನ 2.30ಕ್ಕೆ ದೆಹಲಿಯ ಮಾಯಾಕೃಷ್ಣನ್ ಅವರಿಂದ ‘ವಾಕ್’ ರಂಗಪ್ರಸ್ತುತಿ ಆಯೋಜಿಸಲಾಗಿದೆ. ಸಂಜೆ 7ಕ್ಕೆ ಬೆಂಗಳೂರಿನ ಥೇಟರ್ ತತ್ಕಾಲ್ ತಂಡದಿಂದ ‘ಕೊಳ’ (ನಿರ್ದೇಶನ ಅಚ್ಯುತ ಕುಮಾರ) ನಾಟಕ ಪ್ರದರ್ಶನವಿದೆ. ಸಂಜೆಯ ಕಾರ್ಯಕ್ರಮದ ನಂತರ ಸಾಗರಕ್ಕೆ ಮರಳಲು ಬಸ್ ವ್ಯವಸ್ಥೆ ಇದೆ ಎಂದು ನೀನಾಸಂ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !