ಅಕ್ರಮ ತಡೆದವರ ಮೇಲೆ ಮೊಕದ್ದಮೆ!

7

ಅಕ್ರಮ ತಡೆದವರ ಮೇಲೆ ಮೊಕದ್ದಮೆ!

Published:
Updated:

ಶಿವಮೊಗ್ಗ: ಸಾಗುವಾನಿ ಮರದ ತುಂಡುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಅರಣ್ಯಾಧಿಕಾರಿ ಹಿಡಿದುಕೊಟ್ಟವರ ಮೇಲೆಯೇ ಮೊಕದ್ದಮೆ ದಾಖಲಿಸಲಾಗಿದೆ ಎಂದು ಉಂಬ್ಳೇಬೈಲು ಗ್ರಾಮಸ್ಥರು ದೂರಿದರು.

ಅ. 6ರಂದು ಉಂಬ್ಲೆಬೈಲು ರಸ್ತೆಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಅರಣ್ಯಾಧಿಕಾರಿ ಅನ್ವರ್ ಹಾಗೂ ಕಾರು ಚಾಲಕ ರವಿ ಅವರನ್ನು ಹಿಡಿದುಕೊಟ್ಟಿದ್ದೆವು. ಆದರೆ, ರವಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಅನ್ವರ್ ಅವರನ್ನು ಬಿಡಲಾಗಿದೆ. ವಾರದ ನಂತರ ಹಿಡಿದುಕೊಟ್ಟವರ ಮೇಲೆಯೇ ಮೊಕದ್ದಮೆ ದಾಖಲಿಸಲಾಗಿದೆ ಎಂದು ಜಯ ಕರ್ನಾಟಕ ಸಂಘಟನೆಯ ಅನಿಲ್ ಮತ್ತು ಅವರ ಸಂಗಡಿಗರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನೂತನ್, ಬಸವರಾಜ್, ಹರೀಶ್, ವಿಶ್ವನಾಥ್, ಚಂದನ್ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !