ಬುಧವಾರ, ನವೆಂಬರ್ 13, 2019
23 °C

ಗ್ರಾಮ ಠಾಣಾ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಆಗ್ರಹ

Published:
Updated:

ಶಿವಮೊಗ್ಗ: ಗ್ರಾಮ ಠಾಣಾಗಳಲ್ಲಿ ವಾಸದ ಮನೆ, ಕೊಟ್ಟಿಗೆ ನಿರ್ಮಿಸಿಕೊಂಡಿರುವ ಜನರಿಗೆ ಹಕ್ಕುಪತ್ರ ನೀಡಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಆಗ್ರಹಿಸಿದರು.

ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಗ್ರಾಮ ಠಾಣಾ ಪ್ರದೇಶಗಳಲ್ಲಿ (ಗೋ ಠಾಣ) ಅನಧಿಕೃತವಾಗಿ ಲಕ್ಷಾಂತರ ಜನರು ಮನೆ, ಕೊಟ್ಟಿಗೆ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಇದುವರೆಗೂ ಅವರಿಗೆ ಹಕ್ಕುಪತ್ರ ಸಿಕ್ಕಿಲ್ಲ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಹಿಂದೆ ಭೂಕಂದಾಯ ಅಧಿನಿಯಮಕ್ಕೆ ತಿದ್ದುಪಡಿ ತಂದು ನಮೂನೆ- 94ಸಿ ಜಾರಿ ಮಾಡಲಾಗಿತ್ತು. ಅದೇ ಮಾದರಿಯಲ್ಲಿ ಭೂ ಕಂದಾಯ ಅಧಿನಿಯಮಕ್ಕೆ ತಿದ್ದುಪಡಿ ತರಬೇಕು. ಗ್ರಾಮ ಪಂಚಾಯಿತಿಯಿಂದ ಜಿಲ್ಲಾ ಪಂಚಾಯಿತಿವರೆಗೆ ಅಲೆದಾಡುವ ಪದ್ಧತಿಗೆ ತಿಲಾಂಜಲಿ ನೀಡಬೇಕು. ಸರಳ ಮಾರ್ಗ ಅನುಸರಿಸಲು ಸೂಚಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್‌ ಮುಖಂಡರಾದ ಜಿ.ಮಾದಪ್ಪ, ಹೊಳೆಮಡಿಲು ವೆಂಕಟೇಶ್, ಹೊನ್ನಮ್ಮ ಮಾಲತೇಶ್, ಎಚ್.ಎಂ.ಸಂಗಯ್ಯ, ಹೇಮಂತಕುಮಾರ್, ಆದಿಶೇಷ ಇದ್ದರು.

ಪ್ರತಿಕ್ರಿಯಿಸಿ (+)