ಶುಕ್ರವಾರ, ನವೆಂಬರ್ 22, 2019
22 °C

ಶನಿವಾರ ಡಾ.ರಮಣಿ ಅಭಿನಂದನಾ ಕಾರ್ಯಕ್ರಮ

Published:
Updated:

ಶಿವಮೊಗ್ಗ: ಕುವೆಂಪು ರಂಗಮಂದಿರದಲ್ಲಿ ಅ.19ರಂದು ಸಂಜೆ 5.30ಕ್ಕೆ ಡಾ.ಆರ್.ವಿ.ರಮಣಿ ಅವರಿಗೆ ಅಭಿನಂದನಾ ಹಮ್ಮಿಕೊಳ್ಳಲಾಗಿದೆ.

ರಮಣಿ ಶಂಕರ ಕಣ್ಣಿನ ಆಸ್ಪತ್ರೆಯ ಸಂಸ್ಥಾಪಕರು. ಅವರಿಗೆ ದ್ಮಶ್ರೀ ಪ್ರಶಸ್ತಿ ಬಂದಿರುವ ಕಾರಣ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಭಿನಂದನಾ ಸಮಿತಿ ಅಧ್ಯಕ್ಷ ಡಾ.ಪಿ.ನಾರಾಯಣ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಶಂಕರಕಣ್ಣಿನ ಆಸ್ಪತ್ರೆಯ ದಶಮಾನೋತ್ಸವ ಸಂಭ್ರಮವೂ ಇದೆ. ರಮಣಿ ಅವರು 40 ಸೇವೆ ಸಲ್ಲಿಸುತ್ತಿದ್ದಾರೆ. ಪತ್ನಿ ಡಾ.ರಾಧಾರಮಣಿ ಅವರ ಜತೆ ಸೇರಿ ಭಾರತದಲ್ಲಿ ಕುರುಡುತನ ನಿವಾರಣೆಗೆ ಶ್ರಮಿಸಿದ್ದಾರೆ. 1.5 ಲಕ್ಷ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿದ್ದಾರೆ ಎಂದು ಶ್ಲಾಘಿಸಿದರು.

ಗೌರಿಗದ್ದೆಯ ವಿನಯ್ ಗುರೂಜಿ, ಕುವೆಂಪು ವಿಶ್ವ ವಿದ್ಯಾಲಯದ ಕುಲಪತಿ ಡಾ.ಬಿ.ಪಿ.ವೀರಭದ್ರಪ್ಪ, ಶಂಕರ ಐಫೌಂಡೇಷನ್ ಅಧ್ಯಕ್ಷ ಡಾ.ಎಸ್.ವಿ. ಬಾಲಸುಬ್ರಮಣ್ಯಂ, ಮೇಯರ್ ಲತಾ ಗಣೇಶ್, ಡಾ.ರಾಧಾರಮಣಿ ಉಪಸ್ಥಿತರಿರುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಾ.ನರೇಂದ್ರ ಭಟ್ , ಮಹೇಶ್, ಡಾ.ಮಂಜುನಾಥ್, ಡಾ.ವೃಂದಾ ಭಟ್, ಸುರೇಖಾ ಮುರಳೀಧರ್, ಗಾಯತ್ರಿ ಇದ್ದರು.

ಪ್ರತಿಕ್ರಿಯಿಸಿ (+)