ಮಂಗಳವಾರ, ನವೆಂಬರ್ 19, 2019
29 °C

ಕೆನರಾ ಬ್ಯಾಂಕ್‌ ಕನ್ನಡ ಕೂಟ: ರಾಜ್ಯೋತ್ಸವ ನಾಳೆ

Published:
Updated:

ಶಿವಮೊಗ್ಗ: ಕೆನರಾ ಬ್ಯಾಂಕ್ ಉದ್ಯೋಗಿಗಳ ಕನ್ನಡ ಕೂಟ ಗಾಂಧಿಪಾರ್ಕ್ ಅಂಬೇಡ್ಕರ್ ಭವನದಲ್ಲಿ ನ.9ರಂದು ಸಂಜೆ 4ಕ್ಕೆ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಿದೆ.

ಬ್ಯಾಂಕ್‌ಗಳಲ್ಲಿ ಪರಿಣಾಮಕಾರಿಯಾಗಿ ಕನ್ನಡ ಬಳಕೆಯಾಗಬೇಕು. ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶ ಸಿಗಬೇಕು. ಕನ್ನಡ ಭಾಷೆ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂಬ ಧ್ಯೇಯ ಇಟ್ಟುಕೊಂಡು ಕನ್ನಡ ಕೂಟ ಸ್ಥಾಪಿಸಲಾಗಿದೆ ಎಂದು ಕನ್ನಡ ಕೂಟದ ಸದಸ್ಯ ಕೆ.ಆರ್.ರಘು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ದೂರದರ್ಶನದ ವಿಶ್ರಾಂತ ನಿರ್ದೇಶಕ ಡಾ.ಮಹೇಶ್ ಜೋಷಿ ಕಾರ್ಯಕ್ರಮ ಉದ್ಘಾಟಿಸುವರು. ಕನ್ನಡ ಕೂಟದ ಮುಖ್ಯಸ್ಥರಾದ ಸೋಲೋಮನ್ ಮೆಂದಿಸ್  ಅಧ್ಯಕ್ಷತೆ ವಹಿಸಲಿದ್ದಾರೆ. ಕೆನರಾ ಬ್ಯಾಂಕಿನ ಉಪ ಮಹಾ ವ್ಯವಸ್ಥಾಪಕ ರಾಘವೇಂದ್ರ ಕನಲ, ನಟಿ ಸುಪ್ರಿಯಾ ಎಸ್. ರಾವ್ ಭಾಗವಹಿಸುವರು ಎಂದರು.

ಒಂದು ವರ್ಷದಿಂದ ಬ್ಯಾಂಕಿಂಗ್ ಪರೀಕ್ಷೆಗಳ ಕುರಿತು ಮಾಹಿತಿ ನೀಡುವ ಕೆಲಸ ಮಾಡಲಾಗುತ್ತಿದೆ. ಪರೀಕ್ಷಾ ಸಿದ್ಧತೆ ಕುರಿತು ತರಬೇತಿ, ಮಾರ್ಗದರ್ಶನ ನೀಡುತ್ತಾ ಬಂದಿದ್ದೇವೆ. ಇದುವರೆಗೂ ಸುಮಾರು 13 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಾಹಿತಿ ತಲುಪಿಸಿದ್ದೇವೆ. ಮತದಾನ ಜಾಗೃತಿ ಸೇರಿದಂತೆ ಹಲವು ಸಾಮಾಜಿಕ ಕ್ಷೇತ್ರದಲ್ಲಿ ಕೂಡ ಕನ್ನಡ ಕೂಟ ಕೆಲಸ ಮಾಡುತ್ತಾ ಬಂದಿದೆ ಎಂದು ವಿವರ ನೀಡಿದರು.

ಕನ್ನಡ ಕೂಟದ ಸದಸ್ಯ ರಾಜೇಂದ್ರ ಪೈ ಮಾತನಾಡಿ, ಕನ್ನಡಿಗರಿಗೆ ಬ್ಯಾಂಕ್‌ಗಳಲ್ಲಿ ಉತ್ತಮ ಅವಕಾಶ ದೊರಕಬೇಕು. ಕನ್ನಡದ ಕಂಪು ಹರಡಬೇಕು ಎಂಬುದು ಕೂಟದ ಆಶಯ. ಈ ಕಾರ್ಯಕ್ರಮದಲ್ಲಿ ರಾಜ್ಯದ ಕೆನರಾ ಬ್ಯಾಂಕಿನ ಉದ್ಯೋಗಿಗಳು, ಅವರ ಕುಟುಂಬದ ಸದಸ್ಯರು ಭಾಗವಹಿಸುವರು ಎಂದು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಹರೀಶ್‌ಕುಮಾರ್, ಜಗದೀಶ್, ಮಿಥುನ್ ಗೌಡ ಇದ್ದರು.

ಪ್ರತಿಕ್ರಿಯಿಸಿ (+)