ಗ್ರಾ.ಪಂ. ಕಚೇರಿಗೆ ಬೀಗ ಜಡಿದು ಪ್ರತಿಭಟನೆ

7

ಗ್ರಾ.ಪಂ. ಕಚೇರಿಗೆ ಬೀಗ ಜಡಿದು ಪ್ರತಿಭಟನೆ

Published:
Updated:
ನಿಡಗುಂದಿ ಸಮೀಪದ ಕೂಡಗಿ ಗ್ರಾಮದ ಬಳಿ ಎನ್‌ಟಿಪಿಸಿ ಕೂಡಗಿ ಘಟಕಕ್ಕೆ ಅಗತ್ಯವಿರುವ ರೈಲ್ವೆ ಮೇಲ್ಸೆತುವೆ ನಿರ್ಮಾಣ ವಿರೋಧಿಸಿ ಬುಧವಾರ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟಿಸಿದರು

ನಿಡಗುಂದಿ: ಸಮೀಪದ ಕೂಡಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಬಳಿ ಎನ್‌ಟಿಪಿಸಿ ಕೂಡಗಿ ಘಟಕಕ್ಕೆ ಅಗತ್ಯವಾಗಿರುವ ರೈಲು ಮಾರ್ಗಕ್ಕಾಗಿ ನಿರ್ಮಿಸಲಾಗುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ತಡೆಗೆ ಆಗ್ರಹಿಸಿ ಗ್ರಾಮ ಪಂಚಾಯಿತಿಗೆ ಬೀಗ ಜಡಿದ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.

ರೈಲು ಮೇಲ್ಸೇತುವೆಯಿಂದ ಅಕ್ಕಪಕ್ಕದ ಮನೆ, ಶಾಲೆ, ಮತ್ತಿತರ ಕಟ್ಟಡಗಳಿಗೆ ಹಾನಿಯಾಗಲಿದ್ದು, ಶಾಲಾ ಮಕ್ಕಳ ಕಲಿಕೆಗೆ, ಮಸೀದಿಯಲ್ಲಿ ಭಕ್ತರ ಪ್ರಾರ್ಥನೆಗೆ ಅಡ್ಡಿಯಾಗುತ್ತದೆ. ಪರಿಸರ, ಜಲ ಮತ್ತು ವಾಯು ಮಾಲಿನ್ಯವಾಗಿ ಜನಜೀವನ ಅಸ್ತವ್ಯಸ್ತಗೊಳ್ಳಲಿದೆ. ಆದ್ದರಿಂದ ಮೇಲ್ಸೇತುವೆ ಕಾಮಗಾರಿ ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ಈ ಭಾಗದ ಜನತೆಯ ಮನೆ, ಶಾಲೆ, ಮಸೀದಿ ಮತ್ತು ದೇವಸ್ಥಾನಗಳಿಗೆ ಪುನರ್ವಸತಿ ಕಲ್ಪಿಸಿ ಸೂಕ್ತ ಪರಿಹಾರ ಒದಗಿಸಬೇಕೆಂದು ಗ್ರಾಮ ಪಂಚಾಯಿತಿ ಸದಸ್ಯ ಶರಣು ದೊಡಮನಿ, ಜಯಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಆಶೀಪ್ ತಾಳಿಕೋಟಿ, ಕಸ್ತೂರಿ ಮನಗೂಳಿ, ಶಹಜಾದಬಿ ಕೊಳ್ಳಿ ಮತ್ತಿತರರು ಒತ್ತಾಯಿಸಿದರು.

ಗ್ರಾಮಸ್ಥರಾದ ಅಬೂಬಕರ್‌ ನಂದ್ಯಾಳ, ರಫೀಕ್‌ ಕೊರಬು, ಕಾಸೀಮ್‌ಸಾಬ್‌ ಮನಗೂಳಿ, ಸಿಕಂದರ್‌ ಕೊಳ್ಳಿ, ಸಲೀಂ ದಡೇದ, ಆಶೀಪ್ ಇನಾಮದಾರ, ಹುಸೇನ್‌ ಜಾಗೀರದಾರ್‌, ಆಯಾಜ್ ಮಾಶಾಳ, ಡೋಂಗ್ರಿಮಾ ಇನಾಮದಾರ, ಚಾಂದಬಿ ಕೊರಬು, ಮಾಲನಬಿ ಜಾಗೀರದಾರ್‌, ಮಸ್ತಾನ್‌ ಜಾಗೀರದಾರ್‌ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬೀಗ ತೆರವುಗೊಳಿಸಿದ ಪಿಎಸ್ಐ:

ಸುದ್ದಿ ತಿಳಿದು ಕೂಡಗಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಕೊಲ್ಹಾರ ಪಿಎಸ್ಐ ರವೀಂದ್ರ ಅಜ್ಜನ್ನವರ ಗ್ರಾಮಸ್ಥರಿಗೆ ತಿಳಿಹೇಳಿ ಬೀಗ ತೆರವುಗೊಳಿಸಿದರು. ಬಳಿಕ ಹೋರಾಟಗಾರರನ್ನು ಎನ್‌ಟಿಪಿಸಿಯ ಪುನರ್ವಸತಿ ಮತ್ತು ಪುನರ್‌ ನಿರ್ಮಾಣ ವಿಭಾಗದ ಕಚೇರಿಯ ಉನ್ನತಾಧಿಕಾರಿಗಳ ಭೇಟಿಗೆ ಕರೆದೊಯ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !