ಶುಕ್ರವಾರ, ಡಿಸೆಂಬರ್ 6, 2019
20 °C

ಜಮೀನು ಸ್ವಾಧೀನಕ್ಕೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರ ಜಮೀನು ಸ್ವಾಧೀನಕ್ಕೆ ನೀಡಬೇಕು ಎಂದು ಆಗ್ರಹಿಸಿ ಭದ್ರಾವತಿ ತಾಲ್ಲೂಕು ಕೆಂಚನಹಳ್ಳಿ ಕಾಲೊನಿಯ ಸೀತಾರಾಮ ಕುಟುಂಬದ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸಿದರು.

ಸಂತ್ರಸ್ತರಿಗಾಗಿ ಸರ್ಕಾರ ಜಮೀನು ನೀಡಿದ್ದರೂ, ಕೂಡ ಅಧಿಕಾರಿಗಳು ಇದುವರೆಗೂ ತಮಗೆ ಮಂಜೂರು ಮಾಡಿಲ್ಲ. ಸಾಗುವಳಿ ಮಾಡಲು ಕೂಡ ಆಗುತ್ತಿಲ್ಲ ಎಂದು ದೂರಿದರು.

ಮೂಲತಃ ಹೊಸನಗರ ತಾಲ್ಲೂಕು ನಗರ ಹೋಬಳಿ ಇಂದ್ರೋಡಿ ಬಳಿ ನೆಲೆಸಿದ್ದ ಕುಟುಂಬ ಶರಾವತಿ ಮುಳುಗಡೆ ನಂತರ ಭದ್ರಾವತಿ ತಾಲ್ಲೂಕು ಕೂಡ್ಲಿಗೆರೆ ಹೋಬಳಿ ಯರೆಹಳ್ಳಿ ಬಳಿ ನೆಲೆಸಿದ್ದೇವೆ. 1964ರಲ್ಲೇ 3 ಎಕರೆ ಜಮೀನು ಸಾಗುವಳಿಗೆ ಆದೇಶ ನೀಡಲಾಗಿತ್ತು. ಇದುವರೆಗೂ ಜಮೀನಿಗೆ ಪಕ್ಕಾ ಪೋಡು ಆಗಿಲ್ಲ. ಕಂದಾಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಸಾಗುವಳಿ ಮಾಡಲು ಹೋದರೆ ಅರಣ್ಯ ಇಲಾಖೆ ತಡೆಯುತ್ತಾರೆ ಎಂದು ದೂರಿದರು.

ಕುಟುಂಬದ ಸದಸ್ಯರಾದ ಸೀತಾರಾಮು, ಲಲಿತಮ್ಮ, ಮಹೇಶ್, ಮಹದೇವಪ್ಪ ಇದ್ದರು.

ಪ್ರತಿಕ್ರಿಯಿಸಿ (+)