ಜಾನಪದ ಸಾಹಿತ್ಯ ದಿಗ್ಗಜ: ಪುರುಷೋತ್ತಮ ಗಲಗಲಿ ನಿಧನ

ಗುರುವಾರ , ಜೂಲೈ 18, 2019
29 °C

ಜಾನಪದ ಸಾಹಿತ್ಯ ದಿಗ್ಗಜ: ಪುರುಷೋತ್ತಮ ಗಲಗಲಿ ನಿಧನ

Published:
Updated:

ಇಂಡಿ (ವಿಜಯಪುರ ಜಿಲ್ಲೆ): ತಾಲ್ಲೂಕಿನ ಹಲಸಂಗಿ ಗ್ರಾಮದ ಜಾನಪದ ಸಾಹಿತ್ಯ ಲೋಕದ ದಿಗ್ಗಜ ದಿ. ಮಧುರಚೆನ್ನರ ಹಿರಿಯ ಮಗ ಪುರುಷೋತ್ತಮ ಗಲಗಲಿ (91) ಮಂಗಳವಾರ ನಿಧನರಾದರು.

ಇವರಿಗೆ ಮೂರು ಜನ ಪುತ್ರರು, ಮೂರು ಜನ ಪುತ್ರಿಯರು ಇದ್ದಾರೆ. ಜೂ.19ರಂದು ಬೆಳಿಗ್ಗೆ 10 ಗಂಟೆಗೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂದ ಮೂಲಗಳು ತಿಳಿಸಿವೆ.

ಇವರು ಅರವಿಂದೋ ಆಶ್ರಮದ ಹಿರಿಯ ಸಾಧಕರು. ಕರ್ನಾಟಕದ ಅರವಿಂದ ಸೊಸೈಟಿಯ ವಲಯ ಉಪಾಧ್ಯಕ್ಷ, ಅಖಿಲ ಭಾರತ ಪತ್ರಿಕೆಯ ಕನ್ನಡ ಅನುವಾದಕ ಮತ್ತು ಪತ್ರಿಕೆಯ ಪರೀಲನಾ ಸಮಿತಿ ಸದಸ್ಯ, ಹಲಸಂಗಿ ಗೆಳೆಯರ ಪ್ರತಿಷ್ಠಾನದ ಸದಸ್ಯರಾಗಿದ್ದರು. ಚಡಚಣದಲ್ಲಿ ನಡೆದಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !