ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗಳಲ್ಲಿ 1016 ಎಂಎಲ್‍ಡಿ ನೀರು ಸಂಗ್ರಹ: ಪೌರಾಯುಕ್ತ 

Published 28 ಏಪ್ರಿಲ್ 2024, 15:44 IST
Last Updated 28 ಏಪ್ರಿಲ್ 2024, 15:44 IST
ಅಕ್ಷರ ಗಾತ್ರ

ಸಿಂಧನೂರು: ‘ನಗರಸಭೆಯ ವಿವಿಧ ಕೆರೆಗಳಲ್ಲಿ ಒಟ್ಟು 1016 ಎಂಎಲ್‍ಡಿ ನೀರು ಸಂಗ್ರಹವಿದ್ದು, ಜೂನ್ ತಿಂಗಳ ಮಧ್ಯದವರೆಗೆ ನೀರು ಸರಬರಾಜು ಮಾಡಲು ಮುಂಜಾಗ್ರತೆ ವಹಿಸಲಾಗಿದೆ’ ಎಂದು ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ತಿಳಿಸಿದ್ದಾರೆ.

ಭಾನುವಾರ ಹೇಳಿಕೆ ನೀಡಿರುವ ಅವರು,‘ನಗರದ ದೊಡ್ಡ ಕೆರೆಯಲ್ಲಿ 100 ಎಂಎಲ್‍ಡಿ, ಸಣ್ಣ ಕೆರೆಯಲ್ಲಿ 30 ಎಂಎಲ್‍ಡಿ ಹಾಗೂ ತುರ್ವಿಹಾಳ ಬಳಿಯಿರುವ ಕೆರೆಯಲ್ಲಿ 1140 ಎಂಎಲ್‍ಡಿ ಸೇರಿ ಒಟ್ಟು 1270 ಎಂಎಲ್‍ಡಿ ನೀರು ಸಂಗ್ರಹವಿದೆ. ಇದರಲ್ಲಿ ಶೇ 20 ರಷ್ಟು ಆವಿಯಾಗಲಿದ್ದು, 1016 ಎಂಎಲ್‍ಡಿ ನೀರು ಲಭ್ಯವಾಗಲಿದೆ. ಆದರೆ ಕೆಲ ಕಿಡಿಗೇಡಿಗಳು ಕೆರೆಗಳಲ್ಲಿ ನೀರು ಖಾಲಿಯಾಗಿದೆ ಎಂದು ಸುಳ್ಳು ಸುದ್ದಿ ಹರಿಬಿಟ್ಟು ಜನರಲ್ಲಿ ಆತಂಕ ಮೂಡಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ಈ ಸುಳ್ಳು ಸುದ್ದಿಗೆ ನಗರದ ಜನತೆ ಕಿವಿಗೊಡಬಾರದು’ ಎಂದು ಹೇಳಿದ್ದಾರೆ.

ಪ್ರಸ್ತುತ ವಾರಕ್ಕೊಮ್ಮೆ ಶುದ್ಧೀಕರಿಸಿ ನೀರು ಸರಬರಾಜು ಮಾಡುತ್ತಿದ್ದು, ನೀರಿನ ಲಭ್ಯತೆ ಆಧಾರದ ಮೇಲೆ ನೀರು ಸರಬರಾಜು ಅವಧಿಯನ್ನು ವಿಸ್ತರಿಸಲಾಗುವುದು. ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು. ಕಡ್ಡಾಯವಾಗಿ ನಲ್ಲಿಗಳಿಗೆ ಕಂಟ್ರೋಲರ್‌ ಗಳನ್ನು ಹಾಕಬೇಕು. ಒಂದು ವೇಳೆ ನೀರನ್ನು ಅನವಶ್ಯಕವಾಗಿ ವ್ಯಯಿಸಿದರೆ ಅಂಥವರಿಗೆ ನಿಯಮಾನುಸಾರ ದಂಡ ವಿಧಿಸುವುದಲ್ಲದೆ ಅವರ ನಲ್ಲಿ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ಮಂಜುನಾಥ ಗುಂಡೂರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT