ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸೆ, ಆಮಿಷ ತೋರಿ ರಾಜ್ಯದಲ್ಲಿ ಅಧಿಕಾರ ಹಿಡಿದ ಕಾಂಗ್ರೆಸ್‌: ಹಾಲಪ್ಪ ಆಚಾರ್‌

Published 20 ಏಪ್ರಿಲ್ 2024, 14:20 IST
Last Updated 20 ಏಪ್ರಿಲ್ 2024, 14:20 IST
ಅಕ್ಷರ ಗಾತ್ರ

ಕವಿತಾಳ: ‘ರಾಜ್ಯ ಕಾಂಗ್ರೆಸ್‌ ಸರ್ಕಾರದ ಆಸೆ, ಆಮಿಷಗಳಿಗೆ ಬಲಿಯಾಗದೆ ದೇಶದ ಸಮಗ್ರ ಅಭಿವೃದ್ಧಿಗಾಗಿ ಪ್ರಜ್ಞಾವಂತ ಮತದಾರರು ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಬೇಕು’ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್‌ ಹೇಳಿದರು.

ಸಮೀಪದ ವಟಗಲ್‌ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪಕ್ಷದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ‘ಕಳೆದ 60 ವರ್ಷಗಳ ಸುಧೀರ್ಘ ಅವಧಿಯಲ್ಲಿ ಕಾಂಗ್ರೆಸ್‌ ಹೇಳಿದ್ದಕ್ಕೂ ಮಾಡುತ್ತಿರುವುದಕ್ಕೂ ಒಂದಕ್ಕೊಂದು ಸಂಬ್ಬಂಧವಿಲ್ಲ. ನಮ್ಮ ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ದೇಶಕ್ಕೆ ಮೋದಿ ನೇತೃತ್ವ ಅಗತ್ಯ. ಹೀಗಾಗಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್‌ ಮಾತನಾಡಿ, ‘ಭಾರತವನ್ನು ವಿಶ್ವಗುರು ಮಾಡುವ ಸಂಕಲ್ಪದೊಂದಿಗೆ ಹಗಲಿರುಳು ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು 10 ವರ್ಷಗಳಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸಗಳು, ದೇಶದ ಭದ್ರತೆ ವಿಷಯದಲ್ಲಿ ಅವರು ತೋರುವ ಎದೆಗಾರಿಕೆ ನಮಗೆ ಮಾದರಿಯಾಗಿದೆ. ಕೇಂದ್ರದ ಯೋಜನೆಗಳೊಂದಿಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನನಗೆ ಮತ ನೀಡಿ’ ಎಂದು ಕೋರಿದರು.

ಪಕ್ಷದ ಮಸ್ಕಿ ಮಂಡಲ ಅಧ್ಯಕ್ಷ ಶರಣಯ್ಯ ಸೊಪ್ಪಿಮಠ, ಮಾಜಿ ಶಾಸಕರಾದ ಪ್ರತಾಪಗೌಡ ಪಾಟೀಲ, ಬಸನಗೌಡ ಬ್ಯಾಗವಾಟ್, ಮುಖಂಡರಾದ ಸಿ.ವಿ. ಚಂದ್ರಶೇಖರ, ಎಚ್. ಗಿರೇಗೌಡ್ರು, ಸಂತೋಷ ರಾಜಗುರು, ಜಗದೀಶ್ಚಂದ್ರ ಸ್ವಾಮಿ ಹಾಲಾಪುರ, ವಿಶ್ವನಾಥ ಪಾಟೀಲ, ಚಂದ್ರಶೇಖರ ಪಾಟೀಲ ಗೂಗೆಬಾಳ, ಶರಣಪ್ಪಗೌಡ ಶಾಂತಗೇರಿ, ಕರಿಲಿಂಗಪ್ಪ ಹಿರೇದಿನ್ನಿ, ರಾಘವೇಂದ್ರ ನಾಯಕ, ಶಿವನಗೌಡ ಪಾಟೀಲ, ಶಿವಕುಮಾರ ವಟಗಲ್, ಆದನಗೌಡ ಪಾಟೀಲ, ಸುಧಾಕರ, ಮಲ್ಲಪ್ಪ ಎಲೇರಿ, ರಾಜು ಕಲ್ಯಾಣಿ, ಹುಚ್ಚರೆಡ್ಡಿ ಉಪಸ್ಥಿತರಿದ್ದರು.

ತೋರಣದಿನ್ನಿ, ಹಿರೇದಿನ್ನಿ ಮತ್ತು ಮಲ್ಲದಗುಡ್ಡ ಗ್ರಾಮ ಪಂಚಾಯಿತಿಯ ಪಕ್ಷದ ಪ್ರಮುಖರ ಸಭೆ ತೋರಣದಿನ್ನಿ ಶಕ್ತಿ ಕೇಂದ್ರದಲ್ಲಿ ನಡೆಯಿತು. ಅಮೀನಗಡ ಹಾಗೂ ಪಾಮನಕಲ್ಲೂರು ಗ್ರಾಮಗಳಲ್ಲಿ ನಡೆದ ಸಭೆಯಲ್ಲಿ ಮುಖಂಡರು ಮತಯಾಚಿಸಿದರು.

ಕವಿತಾಳ ಸಮೀಪದ ವಟಗಲ್‌ ಗ್ರಾಮದಲ್ಲಿ ಶುಕ್ರವಾರ ನಡೆದ ಬಿಜೆಪಿ ಪಕ್ಷದ ಪ್ರಮುಖರ ಸಭೆಯಲ್ಲಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್‌ ಮಾತನಾಡಿದರು
ಕವಿತಾಳ ಸಮೀಪದ ವಟಗಲ್‌ ಗ್ರಾಮದಲ್ಲಿ ಶುಕ್ರವಾರ ನಡೆದ ಬಿಜೆಪಿ ಪಕ್ಷದ ಪ್ರಮುಖರ ಸಭೆಯಲ್ಲಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್‌ ಮಾತನಾಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT