ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1,553 ಕೆ.ಜಿ ಚಿನ್ನ ಉತ್ಪಾದನೆ

ಹಟ್ಟಿ ಚಿನ್ನದ ಗಣಿ ಕಂಪನಿ: ಶೇ 90ರಷ್ಟು ಸಾಧನೆ
Published 13 ಏಪ್ರಿಲ್ 2024, 15:49 IST
Last Updated 13 ಏಪ್ರಿಲ್ 2024, 15:49 IST
ಅಕ್ಷರ ಗಾತ್ರ

ಹಟ್ಟಿ ಚಿನ್ನದ ಗಣಿ (ರಾಯಚೂರು ಜಿಲ್ಲೆ): ಸರ್ಕಾರಿ ಸ್ವಾಮ್ಯದ ಹಟ್ಟಿ ಚಿನ್ನದ ಗಣಿ ಕಂಪನಿಯು 2023–24ನೇ ಆರ್ಥಿಕ ವರ್ಷದಲ್ಲಿ ಒಟ್ಟು 1,553 ಕೆ.ಜಿ ಚಿನ್ನ ಉತ್ಪಾದಿಸುವ ಮೂಲಕ ಶೇ 90ರಷ್ಟು ಗುರಿ ಸಾಧಿಸಿದೆ.

ಕಳೆದ ಆರ್ಥಿಕ ವರ್ಷದಲ್ಲಿ 7.51 ಲಕ್ಷ ಟನ್ ಅದಿರು ತೆಗೆದು ಸಂಸ್ಕರಿಸುವ ಗುರಿ ಹೊಂದಿತ್ತು. ಒಟ್ಟು 7.18 ಲಕ್ಷ ಟನ್ ಅದಿರು ತೆಗೆದಿದೆ. ಒಟ್ಟು 1,750.578 ಕೆ.ಜಿ. ಚಿನ್ನ ಉತ್ಪಾದನೆಯ ಗುರಿ ಹೊಂದಿತ್ತು. ಒಟ್ಟು 1,553.110 ಕೆ.ಜಿ ಚಿನ್ನ ಉತ್ಪಾದಿಸಿದೆ.

2023ರ ಏಪ್ರಿಲ್‌ನಲ್ಲಿ 98.846 ಕೆ.ಜಿ, ಮೇ ತಿಂಗಳಿನಲ್ಲಿ 94.234 ಕೆ.ಜಿ, ಜೂನ್‌ನಲ್ಲಿ 98.542 ಕೆ.ಜಿ, ಜುಲೈನಲ್ಲಿ 99.642 ಕೆ.ಜಿ, ಆಗಸ್ಟ್‌ನಲ್ಲಿ 110.600 ಕೆ.ಜಿ, ಸೆಪ್ಟೆಂಬರ್‌ನಲ್ಲಿ 109.427 ಕೆ.ಜಿ, ಅಕ್ಟೋಬರ್‌ನಲ್ಲಿ 113.260 ಕೆ.ಜಿ, ನವೆಂಬರ್‌ನಲ್ಲಿ 83.273 ಕೆ.ಜಿ ಹಾಗೂ ಡಿಸೆಂಬರ್‌ನಲ್ಲಿ 118.372 ಕೆ.ಜಿ. ಚಿನ್ನ ಉತ್ಪಾದಿಸಲಾಗಿದೆ. 

ಪ್ರಸಕ್ತ ವರ್ಷದ ಜನವರಿಯಲ್ಲಿ 132.517 ಕೆ.ಜಿ, ಫೆಬ್ರುವರಿಯಲ್ಲಿ 253.171 ಕೆ.ಜಿ, ಮಾರ್ಚ್‌ನಲ್ಲಿ 241.221 ಕೆ.ಜಿ. ಚಿನ್ನ ಉತ್ಪಾದಿಸಲಾಗಿದೆ ಎಂದು ಆಡಳಿತ ಮಂಡಳಿಯು ತಿಳಿಸಿದೆ.

‘ಅಧಿಕಾರಿಗಳು ಹಾಗೂ ಕಾರ್ಮಿಕರ ಪರಿಶ್ರಮದ ಫಲವಾಗಿ ಶೇ 90ರಷ್ಟು ಚಿನ್ನ ಉತ್ಪಾದನೆ ಸಾಧ್ಯವಾಗಿದೆ. ನೌಕರ ವರ್ಗಕ್ಕೆ ಇನ್ನಷ್ಟು ಮೂಲ ಸೌಕರ್ಯ ಒದಗಿಸುವ ದಿಸೆಯಲ್ಲಿ ಚಿಂತನೆ ನಡೆದಿದೆ’ ಎಂದು ಹಟ್ಟಿ ಚಿನ್ನದಗಣಿ ಕಂಪನಿಯ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರಕಾಶ ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT