ಬುಧವಾರ, ಡಿಸೆಂಬರ್ 11, 2019
27 °C

‘ಮೀನು ಸಾಗಿಸಲು ಪ್ರಮಾಣಪತ್ರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ರಾಯಚೂರು: ಕರಾವಳಿ ಭಾಗದಿಂದ ಗೋವಾ ರಾಜ್ಯಕ್ಕೆ ಮೀನು ಸಾಗಿಸುವವರಿಗೆ ರಾಜ್ಯ ಸರ್ಕಾರದಿಂದ ಪ್ರಮಾಣಪತ್ರ ನೀಡಲಾಗುತ್ತಿದೆ ಎಂದು ಮೀನುಗಾರಿಕೆ ಸಚಿವ ವೆಂಕಟರಾವ್‌ ನಾಡಗೌಡ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಯಮ ಪಾಲನೆ ಮಾಡುತ್ತಿರುವವರಿಗೆ ಮಾತ್ರ ಪ್ರಮಾಣಪತ್ರವನ್ನು ಅಧಿಕಾರಿಗಳು ನೀಡುತ್ತಿದ್ದಾರೆ. ಇದನ್ನು ತೋರಿಸಿದ ಮೀನು ಸಾಗಣೆ ವಾಹನಗಳನ್ನು ಗೋವಾ ಅಧಿಕಾರಿಗಳು ಬಿಡುತ್ತಿದ್ದಾರೆ. ನಿಷೇಧ ತೆರವುಗೊಳಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗೋವಾ ಮುಖ್ಯಮಂತ್ರಿಗೆ ಪತ್ರ ಬರೆದು ಕೋರಿದ್ದಾರೆ ಎಂದರು.

ಪ್ರತಿಕ್ರಿಯಿಸಿ (+)