ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾಟೆ ಸ್ಪರ್ಧೆ : ರಾಯಚೂರು ಜಿಲ್ಲೆಗೆ 11 ಪದಕ

ಕಲಬುರಗಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟ
Published 10 ಅಕ್ಟೋಬರ್ 2023, 15:34 IST
Last Updated 10 ಅಕ್ಟೋಬರ್ 2023, 15:34 IST
ಅಕ್ಷರ ಗಾತ್ರ

ರಾಯಚೂರು: ಕಲ್ಯಾಣ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಮತ್ತು ಕಲಬುರಿಯ ಡಿಸ್ಟ್ರಿಕ್ ಕರಾಟೆ ಆಸೋಸಿಯೇಷನ್ ವತಿಯಿಂದ ಕಲಬುರಗಿಯ ಚಂದ್ರಶೇಖರ ಪಾಟೀಲ ಒಳ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕಲಬುರಗಿ ವಿಭಾಗ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಜಿಲ್ಲೆಯ 11 ಕರಾಟೆ ಪಟುಗಳು ಬಹುಮಾನ ಗೆದ್ದುಕೊಂಡಿದ್ದಾರೆ.

ಜಿಲ್ಲೆಯ ಮೂವರು ಮೊದಲ ಸ್ಥಾನ, ಐವರು ಎರಡನೇ ಸ್ಥಾನ ಹಾಗೂ ಮೂವರು ಮೂರನೇ ಸ್ಥಾನ ಪಡೆದು ಒಟ್ಟು ಹನ್ನೊಂದು ಪದಕಗಳನ್ನು ಗೆದ್ದುಕೊಂಡಿದ್ದಾರೆ. ವೀಜೇತ ಸ್ಪರ್ಧಿಗಳು ಇದೇ ಅ.14 ರಂದು ಮೈಸೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ವಿಜೇತರು ಇಂತಿದ್ದಾರೆ. ಮಹಿಳೆಯರ 50ಕೆಜಿ ವಿಭಾಗದಲ್ಲಿ ಶಾಜಿಯಾ ಮೊದಲನೇ ಸ್ಥಾನ, ಪುರುಷರ 75 ಕೆಜಿ ವಿಭಾಗದಲ್ಲಿ ಹುಲಿಗೆಪ್ಪ ಹಾಗೂ 84ಕೆಜಿ ವಿಭಾಗದಲ್ಲಿ ಫಾರೂಕ್ ವಿಜೇತರಾಗಿದ್ದಾರೆ.

68ಕೆಜಿ ವಿಭಾಗದಲ್ಲಿ ಮಲ್ಲಮ್ಮ, 45 ಕೆಜಿ ವಿಭಾಗದಲ್ಲಿ ಹನುಮೇಶ, 50 ಕೆಜಿ ವಿಭಾಗದಲ್ಲಿ ಮನೋಜ್, 84ಕೆಜಿ ವಿಭಾಗದಲ್ಲಿ ಶೇಖರ್ ರಾಥೋಡ್ ವಿಜೇತರಾಗಿದ್ದಾರೆ.

ಕಾಟ ಇವೆಂಟ್‌ನಲ್ಲಿ ಮನೋಜ್ ಮೂರನೇ ಸ್ಥಾನ, 67ಕೆಜಿ ವಿಭಾಗದಲ್ಲಿ ರೆಹಮಾನ್ ಮತ್ತು 68 ಕೆಜಿ ವಿಭಾಗದಲ್ಲಿ ವಿದ್ಯಾಶ್ರೀ ಮೂರನೇ ಸ್ಥಾನಗಳಿಸಿದ್ದಾರೆ.

ರಾಯಚೂರು ಜಿಲ್ಲಾ ಕರಾಟೆ ಸ್ಪೋರ್ಟ್ಸ್ ಅಸೋಸಿಯೇಷನ್ ನ ಚೇರ್ ಮನ್ ರಾದ ರಾಮಚಂದ್ರ ಪಾತ್ರೆ, ಅಧ್ಯಕ್ಷ ಅನಿರುದ್ಧ ಪಾತ್ರೆ, ಕಾರ್ಯದರ್ಶಿ ಮಲ್ಲಮ್ಮ ಮತ್ತು ಉಪಾಧ್ಯಕ್ಷರಾದ ರಫೀಕ್ ಹಾಗೂ ಲಾಲಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT